ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರು

ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಕಾರು

Share

ಕುಮಟಾ :-ಗೋಕರ್ಣ ಕಡೆಯಿಂದ ಕುಮಟಾ ಕಡೆ ಚಲಿಸುತ್ತಿದ್ದ ಕಾರ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಮಿರ್ಜಾನ್ ಬಳಿ ನಡೆಯಿದೆ. ಬೈಕ್ ಸವಾರ ಬೈಕ್ ನಿಲ್ಲಿಸಿ ನೀರು ಕುಡಿಯುತ್ತಿದ್ದ ವೇಳೆ ಗೋಕರ್ಣ ಕಡೆಯಿಂದ ಕುಮಟಾ ಕಡೆಗೆ ಚಲಿಸುತ್ತಿದ್ದ ಕಾರ್ ಡಿಕ್ಕಿ ಹೊಡೆದು ನಂತರ ಪಕ್ಕದ ವಿದ್ಯುತ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಪ್ರಾಣಪಾಯದಿಂದ ಎಲ್ಲರೂ ಪಾರಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಮುಖಂಡರು ಕಾರ ಚಾಲಕನ ಜೊತೆ ಮಾತಾಡಿ ಬೈಕ್ ಹಾನಿ ಆಗಿದ್ದಕ್ಕೆ ಹಣ ನೀಡಿ ಅಂತಾ ಹೇಳಿದ್ದು ಕಾರ ಚಾಲಕನು ಕೂಡ ಹಣ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ


Share