ಸ್ವಾಯತ್ತತೆಯ ರಾಷ್ಟ್ರಗಳ ಒಕ್ಕೂಟದ ಸಂಸ್ಥೆ ಕಾಮನ್‍ವೆಲ್ತ್

ಸ್ವಾಯತ್ತತೆಯ ರಾಷ್ಟ್ರಗಳ ಒಕ್ಕೂಟದ ಸಂಸ್ಥೆ ಕಾಮನ್‍ವೆಲ್ತ್

Share

ಕಲಬುರಗಿ:– ದ್ವಿತೀಯ ಮಹಾ ಯುದ್ಧದ ನಂತರ ಬ್ರಿಟೀಷ ಸಾಮ್ರಾಜ್ಯ ಪತನವಾಯಿತು. ಕಾಮನ್‍ವೆಲ್ತ್ ರಾಷ್ಟ್ರಗಳ ಒಕ್ಕೂಟದ ಪರಿಕಲ್ಪನೆ ಮೂಡಿ 1926ರಲ್ಲಿ ಸ್ವಾಯತ್ತತೆ ಪಡೆದ ಪ್ರದೇಶಗಳು ಈ ಒಕ್ಕೂಟದ ಸದಸ್ಯರಾಗಬಹುದು ಎಂದು ನಿರ್ಣಯಿಸಲಾಯಿತು. ಬ್ರಿಟೀಷ ಅಧೀನ, ಆಶ್ರಿತ ಹಾಗೂ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳನ್ನೊಳಗೊಂಡ ಈ ಒಕ್ಕೂಟವನ್ನು ಬ್ರಿಟೀಷ ಕಾಮನ್‍ವೆಲ್ತ್ ಎಂಬ ಹೆಸರಿನಿಂದ ಪರಿಗಣಿಸಲಾಗಿದ್ದು, ಹೊಸ ರಾಷ್ಟ್ರಗಳ ಒಕ್ಕೂಟದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ತೆಯು ಉತ್ತಮ ಆಡಳಿತಕ್ಕೆ ಸಹಕಾರ, ಆರ್ಥಿಕ ಬೆಳವಣಿಗೆ ಪೂರಕ ವಾತಾವರಣ, ನ್ಯಾಯ ಹಾಗೂ ಮಾನವ ಹಕ್ಕುಗಳ ರಕ್ಷಣೆ ಅಂತಹ ಪ್ರಮುಖ ಕಾರ್ಯಗಳನ್ನು ಮಾಡುತ್ತಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಕಾಮನ್‍ವೆಲ್ತ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಮನವೆಲ್ತ್ ಒಕ್ಕೂಟದ ಕಾರ್ಯಾಲಯವು ಲಂಡನನಲ್ಲಿದ್ದು, 1965ರಲ್ಲಿ ಪ್ರಾರಂಭವಾಗಿದೆ. ಇದರ ಕಾರ್ಯವನ್ನು ಜಾರಿಗೊಳಿಸಲು ಪ್ರಧಾನ ಕಾರ್ಯದರ್ಶಿಯವರು ಇರುತ್ತಾರೆ. ಕಾಮನ್‍ವೆಲ್ತ್ ಒಕ್ಕೂಟದಲ್ಲಿ ಒಟ್ಟು 56 ಸದಸ್ಯ ರಾಷ್ಟ್ರಗಳಿವೆ. ಈ ಒಕ್ಕೂಟ ಒಂದು ಅನೌಪಚಾರಿಕ ಸಂಸ್ಥೆಯಾಗಿದೆ. ಯಾವುದೇ ವಿಷಯವನ್ನು ಸಭೆಯಲ್ಲಿ ಚರ್ಚಿಸಬಹುದೆ ಹೊರತು, ಮತಕ್ಕೆ ಹಾಕಿ ನಿರ್ಣಯಿಸುವಂತಿಲ್ಲ. ಒಂದು ಸದಸ್ಯ ರಾಷ್ಟ್ರ ಇನ್ನೊಂದು ಸದಸ್ಯ ರಾಷ್ಟ್ರದಲ್ಲಿ ‘ಹೈ ಕಮೀಷನರ್’ ನೇಮಿಸಿರುತ್ತಾರೆ. ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಶೃಂಗಸಭೆ ಯು.ಕೆ. ಯಲ್ಲಿ ಜರುಗುತ್ತದೆ. ಆದರೆ, ಸದಸ್ಯ ರಾಷ್ಟ್ರಗಳ ವಿನಂತಿ ಮೇರೆಗೆ ಸ್ಥಳ ಬದಲಾವಣೆ ಮಾಡಬಹುದಾಗಿದೆ ಎಂದು ಸಂಸ್ಥೆಯ ರಚನೆ, ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಪ್ರಮುಖರಾದ ರಘುನಂದನ ಕುಲಕರ್ಣಿ, ನಿಲೊಫರ್ ಶೇಖ್, ಪೂಜಾ ಜಮಾದಾರ, ಶಿವರಾಜ ವಿ.ಚಿಂಚೋಳಿ, ಶ್ರೀಕಾಂತ, ಸಚಿನ್ ಘೋಟಕೆ, ಸತೀಶ್ ಚಿಂಚೋಳಿ, ಅನೀಲ ಜವಳಿ, ಅಭಿಷೇಕ ಕೊರಳ್ಳಿ ಹಾಗೂ ವಿದ್ಯಾರ್ಥಿಗಳಿದ್ದರು.


Share