ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನೀರಿನ ಪೈಪ್ ಒಡೆದುಹೋದ ಘಟನೆ ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಸುಮಾರು 8 ಲಕ್ಷ ವೆಚ್ಚದಲ್ಲಿ ಮಾಡುತ್ತಿರುವ ಕಾಮಗಾರಿ ಕಳಪೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗುತ್ತಿಗೆದಾರನ ಲೈಸೆನ್ಸ್ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.ಕೊಳಘಟ್ಟ ಗ್ರಾಮದಲ್ಲಿರುವ ಕೆಂಪಮ್ಮನ ಕೆರೆಯ ಕೋಡಿ ಹರಿದುಹೋಗುತ್ತಿತ್ತು.ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ನೀರಾವರಿ ಇಲಾಖೆ 8 ಲಕ್ಷ ವೆಚ್ಚದಲ್ಲಿ ಪೈಪ್ ಅಳವಡಿಸಿ ಸಮೀಪದ ಹಳ್ಳಕ್ಕೆ ಸಂಗ್ರಹಿಸುವ ಕಾಮಗಾರಿ ಕೈಗೆತ್ತಿಕೊಂಡಿತು.ಮೈಸೂರಿನ ಪ್ರೀತಂ ಎಂಬುವರಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು.ಈಗಾಗಲೇ ಸುಮಾರು ಅರ್ಧ ಕಿಲೋಮೀಟರ್ ಪೈಪ್ ಅಳವಡಿಸಲಾಗಿದೆ.ಆದರೆ ಪೈಪ್ ಹೊಡೆದು ರಂಧ್ರಗಳಾಗಿವೆ.ಕೇವಲ 15 ದಿನಗಳಿಗೇ ಪೈಪ್ ನಲ್ಲಿ ರಂಧ್ರಗಳು ಕಾಣಿಸಿಕೊಂಡಿವೆ.ಸದರಿ ಪೈಪ್ ನಲ್ಲಿ ನೀರು ಹರಿಯಲು ಬಿಟ್ಟರೆ ಸಮೀಪದಲ್ಲಿರುವ ಜಮೀನುಗಳು ಜಲಾವೃತವಾಗುತ್ತದೆ.ಕಳಪೆ ಕಾಮಗಾರಿ ನಡೆಸಿದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಕೂಡಲೇ ಗುತ್ತಿಗೆದಾರನ ಲೈಸೆನ್ಸ್ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.