ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರ ಪರಿಪಾಟಲು..

ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರ ಪರಿಪಾಟಲು..

Share

ಚರಂಡಿ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಬವಣೆ ಅನುಭವಿಸುತ್ತಿರುವ ಪ್ರಕರಣ ಹುಣಸೂರು ತಾಲೂಕಿನ ಕೊಡಗುಕಾಲೋನಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಚರಂಡಿ ನೀರು ಸರಾಗವಾಗಿ ಹರಿದುಹೊಗಲು ಸಾಧ್ಯವಾಗದೆ ನಿವಾಸಿಗಳಿಗೆ ರೋಗರುಜಿನಗಳ ಭೀತಿ ಹುಟ್ಟಿಸಿದೆ.ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ.ಬೇಸತ್ತ ಗ್ರಾಮಸ್ಥರು ಚರಂಡಿಗಾಗಿ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.ಆಸ್ಪತ್ರೆ ಕಾವಲ್ ಗ್ರಾಮಪಂಚಾಯ್ತಿ ವ್ಯಾಪ್ತಿಗೆ ಬರುವ ಕೊಡಗು ಕಾಲೋನಿ ಗ್ರಾಮ ಸಂಪೂರ್ಣ ನಿರ್ಲಕ್ಷ್ಯತೆಗೆ ಒಳಗಾಗಿದೆ.ಪ್ರಮುಖವಾಗಿ ಇಲ್ಲಿನ ನಿವಾಸಿಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ.ಹೀಗಾಗಿ ಕಲ್ಮಷ ನೀರು ರೋಗ ಹರಡುವ ಭೀತಿ ಹುಟ್ಟಿಸಿದೆ.ಚರಂಡಿ ವ್ಯವಸ್ಥೆಗಾಗಿ ಗ್ರಾಮಪಂಚಾಯ್ತಿ,ತಾಲೂಕು ಪಂಚಾಯ್ತಿಗೆ ಅಲೆದಾಡಿದ ಇಲ್ಲಿನ ನಿವಾಸಿಗಳು ಬಸವಳಿದಿದ್ದಾರೆ.ನಿರ್ಲಕ್ಷ್ಯ ತೋರಿಸುತ್ತಿರುವ ಅಧಿಕಾರಿಗಳ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.ಈಗಾಗಲೆ ಜಿಲ್ಲೆಯ ಕೆಲವೆಡೆ ಮಾರಣಾಂತಿಕ ರೋಗಗಳು ಭೀತಿ ಹುಟ್ಟಿಸಿವೆ.ಈ ಹಿನ್ನಲೆ ಇಲ್ಲಿನ ನಿವಾಸಿಗಳು ಮುನ್ನೆಚ್ಚರಿಕೆಗಾಗಿ ಕಲ್ಮಷ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ನಿರಂತರವಾಗಿ ಒತ್ತಾಯಸುತ್ತಲೇ ಬಂದಿದ್ದಾರೆ.ಇನ್ನಾದರೂ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳಾಗಲಿ,ಜನಪ್ರತಿನಿಧಿಗಳಾಗಲಿ ಇತ್ತ ಗಮನಹರಿಸಿ ಚರಂಡಿ ವ್ಯವಸ್ಥೆ ಕಲ್ಪಿಸುವರೇ.


Share