ಒಪ್ಪಿಗೆ ಇಲ್ಲದೆ ಹಾಡು ಬಳಕೆ: ಮಂಜುಮ್ಮೆಲ್ ಬಾಯ್ಸ್ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜ ಕಾನೂನು ಕ್ರಮದ ಎಚ್ಚರಿಕೆ!

ಒಪ್ಪಿಗೆ ಇಲ್ಲದೆ ಹಾಡು ಬಳಕೆ: ಮಂಜುಮ್ಮೆಲ್ ಬಾಯ್ಸ್ ವಿರುದ್ಧ ಸಂಗೀತ ನಿರ್ದೇಶಕ ಇಳಯರಾಜ ಕಾನೂನು ಕ್ರಮದ ಎಚ್ಚರಿಕೆ!

Share

ಚೆನ್ನೈ: ಎಲ್ಲರ ಬಾಯಲ್ಲೂ ಮಲಯಾಳಂನ ಈ ಸಿನಿಮಾದ್ದೇ ಮಾತು, ಮೆಚ್ಚುಗೆ. ಆದರೆ, ಸಂಗೀತ ನಿರ್ದೇಶಕ ಇಳಯರಾಜ ಅವರು ಮಾತ್ರ ಈ ಸಿನಿಮಾದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಯಾಗಿ ಬಹು ಜನಪ್ರಿಯತೆ ಗಳಿಸಿದ್ದ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ತಂಡಕ್ಕೆ ಇಳಯರಾಜ ಅವರು ಕಾಪಿರೈಟ್ ನೋಟಿಸ್ ನೀಡಿದ್ದಾರೆ.

1991 ರ ತಮಿಳು ಚಲನಚಿತ್ರ ಗುಣಾದಿಂದ ಕಣ್ಮಣಿ ಅನ್ಬೋಡು ಹಾಡನ್ನು ಬಳಸಿದ್ದಕ್ಕಾಗಿ ಮಲಯಾಳಂ ಬ್ಲಾಕ್ ಬಸ್ಟರ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಿಗೆ ಇಳಯರಾಜ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.ಗುಣ ಸಿನಿಮಾ 1991ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಸಿನಿಮಾದ ಕಣ್ಮಣಿ..ಹಾಡು ಗಮನ ಸೆಳೆದಿತ್ತು. ಈ ಹಾಡನ್ನು ಜನರು ಬಹಳ ಇಷ್ಟಪಟ್ಟಿದ್ದರು. ಈ ಹಾಡು ‘ಮಂಜುಮ್ಮೆಲ್ ಬಾಯ್ಸ್’ನಲ್ಲಿ ಬಳಕೆ ಆಗಿದೆ. ಆದರೆ, ಈ ಹಾಡನ್ನು ತಮ್ಮ ಒಪ್ಪಿಗೆ ಇಲ್ಲದೆ ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ಇಳಯರಾಜ ಅವರು ಆರೋಪಿಸಿದ್ದಾರೆ.

ಮಂಜುಮ್ಮೆಲ್ ಬಾಯ್ಸ್ ನಿರ್ಮಾಣ ಮಾಡಿದ್ದ ಸೌಬಿನ್ ಶಾಹಿರ್ ಅವರಿಗೆ ಇಳಯರಾಜ ಅವರು ನೋಟಿಸ್ ನೀಡಿದ್ದಾರೆ. ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡಿನ ಹಕ್ಕು ನಮ್ಮದು, ಈ ಹಾಡನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ. ಇಳಯರಾಜ ಅವರು ಈ ಹಾಡಿನ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ’ ಎಂದು ನೋಟಿಸ್​ನಲ್ಲಿ ಹೇಳಲಾಗಿದೆ


Share