ಶುಭಾ ಪೂಂಜಾ ನಟನೆಯ ‘3ದೇವಿ’ ಮೇ 24 ರಂದು ರಿಲೀಸ್

ಶುಭಾ ಪೂಂಜಾ ನಟನೆಯ ‘3ದೇವಿ’ ಮೇ 24 ರಂದು ರಿಲೀಸ್

Share

ಮೊಗ್ಗಿನ ಮನಸ್ಸು ನಟಿ ಶುಭಾ ಪೂಂಜಾ ಅಭಿನಯದ ‘3ದೇವಿ’ ಸಿನಿಮಾ ಮೇ 24 ರಂದು ರಿಲೀಸ್ ಆಗುತ್ತಿದೆ. 3ದೇವಿ ಚಿತ್ರದಲ್ಲಿ ಜ್ಯೋತ್ಸ್ನಾ ರಾವ್ ಮತ್ತು ಸಂಧ್ಯಾ ಜೊತೆಗೆ ಶುಭಾ ಪೂಂಜಾ ನಟಿಸಿದ್ದು, ಕಳೆದ ಎರಡು ವರ್ಷದ ಹಿಂದೆ ಚಿತ್ರದ ಒಂದು ಟ್ರೈಲರ್ ರಿಲೀಸ್ ಆಗಿತ್ತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಯಿತು.

ಈಗ ನಿರ್ದೇಶಕರು ಚಿತ್ರ ರಿಲೀಸ್ ಮಾಡಲು ಸಜ್ಜಾಗುತ್ತಿದ್ದಾರೆ. 3ದೇವಿಗೆ ದಿ ಜಡ್ಜ್‌ಮೆಂಟ್ ಮತ್ತು ಮೂರನೆ ಕೃಷ್ಣಪ್ಪ ಮತ್ತಿತರ ಚಿತ್ರಗಳೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆ ಮಾಡಲಿದೆ. ಆಲ್ಟರ್ಡ್ ಇಗೋ ಬ್ಯಾನರ್‌ನಡಿಯಲ್ಲಿ ಅಶ್ವಿನ್ ಮ್ಯಾಥ್ಯೂ ನಿರ್ದೇಶಿಸಿ ಮತ್ತು ನಿರ್ಮಿಸಿರುವ 3ದೇವಿ ಒಂದು ವಿಶಿಷ್ಟ ತಿರುವು ಹೊಂದಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಶುಭಾ ಪೂಂಜಾ ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲದೆ ಕಾರ್ಯಕಾರಿ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂವರು ನಾಯಕಿಯರು ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ.

ಮೂವರು ಹುಡುಗಿಯರು ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗುವ ಒಂದು ಕಥೆ ಇದಾಗಿತ್ತು. ಇಲ್ಲಿ ಹೆಣ್ಣು ಹುಲಿಯ ಆತ್ಮ ಸುಳಿದಾಡುತ್ತಲೇ ಎಲ್ಲರಿಗೂ ಸರಿಯಾಗಿ ದಾರಿ ತೋರುತ್ತದೆ. ಹೀಗೊಂದು ಕಥೆ ಹೇಳುವ ಕಾಡು ಮನುಷ್ಯನಿಂದಲೇ ಶುರು ಆಗೋ ಈ ಟ್ರೈಲರ್‌ನಲ್ಲಿ ಶುಭಾ ಪೂಂಜಾ ದೇವಿ ರೂಪದಲ್ಲಿಯೇ ಅಭಿನಯಿಸಿದ್ದಾರೆ. ಇನ್ನಿಬ್ಬರು ಹುಡುಗಿಯರು ಶಕ್ತಿದೇವಿಯನ್ನ ಕಾಪಾಡೋ ವಾರಿಯರ್ ರೀತಿ ಕಾಣಿಸುತ್ತಾರೆ. ಜುನ್ನಿ ಎಸ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದು, ಫೆಲ್ ಅಶೋಕ್ 3ದೇವಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.


Share