ನವದೆಹಲಿ: ನಷ್ಟದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಟಾಟಾ ಸಮೂಹ ಇದೀಗ ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದ್ದು, ವೇತನ ಹೆಚ್ಚಳದ ಜೊತೆಗೆ ಬೋನಸ್ ಘೋಷಣೆ ಮಾಡಿದೆ.
ಹೌದು.. ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ಗುರುವಾರ ಗುಡ್‌ನ್ಯೂಸ್ ನೀಡಿದ್ದು, ವೇತನ ಹೆಚ್ಚಳದ ಜೊತೆಗೆ ನೌಕರರ ಕಾರ್ಯಕ್ಷಮತೆಯ ಆಧಾರದ ಮೇಲೆ ಬೋನಸ್ ಸಹ ನೀಡಲಾಗುವುದು ಎಂದು ತಿಳಿಸಿದೆ.ಏಪ್ರಿಲ್ 1ರಿಂದ ಜಾರಿ
ಪಿಟಿಐ ವರದಿಯ ಪ್ರಕಾರ, ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳ ಮತ್ತು ಕಾರ್ಯಕ್ಷಮತೆಯ ಬೋನಸ್ ಅನ್ನು ಘೋಷಿಸಿದ್ದು, ಏಪ್ರಿಲ್ 1, 2024 ರಿಂದ ಉದ್ಯೋಗಿಗಳಿಗೆ ಈ ಪ್ರಯೋಜನವನ್ನು ನೀಡಲಾಗುತ್ತದೆ. ಈ ವೇತನ ಹೆಚ್ಚಳ ಮತ್ತು ಬೋನಸ್ 2023-24 ಹಣಕಾಸು ವರ್ಷ ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಅವಧಿಗೆ ಆಗಿದೆ.
ವೇತನ ಹೆಚ್ಚಳ, ಬೋನಸ್ ಗೆ ಕಂಡೀಷನ್ಸ್ ಅಪ್ಲೈ
ಏರ್ ಇಂಡಿಯಾದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ರವೀಂದ್ರ ಕುಮಾರ್ ಜಿಪಿ ಅವರನ್ನು ಉಲ್ಲೇಖಿಸಿ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದ್ದು, ಏರ್ ಇಂಡಿಯಾ ಮತ್ತು ಅದರ ಉದ್ಯೋಗಿಗಳು ಕಳೆದ ಹಣಕಾಸು ವರ್ಷದಲ್ಲಿ ಅವರು ಹೇಗೆ ಕಾರ್ಯನಿರ್ವಹಿಸಿದರು ಎಂಬುದರ ಆಧಾರದ ಮೇಲೆ ಸಂಬಳ ಹೆಚ್ಚಳ ಮತ್ತು ಬೋನಸ್‌ನ ಲಾಭವನ್ನು ಪಡೆಯುತ್ತಾರೆ ಎಂದು ತಿಳಿಸಲಾಗಿದೆ. ಕಂಪನಿಯ ಎಲ್ಲಾ ಉದ್ಯೋಗಿಗಳು ಸಂಬಳ ಹೆಚ್ಚಳದಿಂದ ಪ್ರಯೋಜನ ಪಡೆಯಲಿದ್ದಾರೆ, ಆದರೆ ಪೈಲಟ್‌ಗಳಿಗೆ ಬೋನಸ್ ಘೋಷಿಸಲಾಗಿದೆ.ಹೆಚ್ಚಳ ಪ್ರಮಾಣ!
ಏರ್ ಇಂಡಿಯಾ ಮೇ 23 ರಂದು ಪೈಲಟ್‌ಗಳಿಗೆ 15,000 ರೂಪಾಯಿಗಳವರೆಗೆ ವೇತನ ಹೆಚ್ಚಳ ಮತ್ತು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ 1.8 ಲಕ್ಷದವರೆಗೆ ವಾರ್ಷಿಕ ಕಾರ್ಯಕ್ಷಮತೆಯ ಬೋನಸ್ ಅನ್ನು ಘೋಷಿಸಿದೆ. ಜೂನಿಯರ್ ಫಸ್ಟ್ ಆಫೀಸರ್ (ಜೆಎಫ್‌ಒ)ಗಳಿಂದ ಹಿರಿಯ ಕಮಾಂಡರ್‌ಗಳಿಗೆ ವಾರ್ಷಿಕ ರೂ 42,000 ರಿಂದ ರೂ 1.8 ಲಕ್ಷದ ಬೋನಸ್ ಅನ್ನು ಘೋಷಿಸಿದೆ. ಫಸ್ಟ್ ಆಫೀಸರ್ ಮತ್ತು ಕ್ಯಾಪ್ಟನ್ ವಾರ್ಷಿಕ 60,000 ಬೋನಸ್ ಪಡೆದರೆ, ಕಮಾಂಡರ್ ಮತ್ತು ಸೀನಿಯರ್ ಕಮಾಂಡರ್ ಕ್ರಮವಾಗಿ 1.32 ಲಕ್ಷ ಮತ್ತು 1.80 ಲಕ್ಷ ಬೋನಸ್ ಪಡೆಯುತ್ತಾರೆ ಎಂದು ತಿಳಿದುಬಂದಿದೆ.
ಮೊದಲ ಬಾರಿಗೆ ವೇತನ ಹೆಚ್ಚಳ
2022 ರಲ್ಲಿ ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಂಡ ನಂತರ, ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ಮೊದಲ ಬಾರಿಗೆ ಸಂಬಳ ಹೆಚ್ಚಳ ಮತ್ತು ಬೋನಸ್‌ನ ಲಾಭವನ್ನು ನೀಡುತ್ತಿದೆ. ವರದಿಯ ಪ್ರಕಾರ, ಏರ್ ಇಂಡಿಯಾ ಹಳೆಯ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ಹೊಸ ಪ್ರತಿಭೆಗಳನ್ನು ತನ್ನ ಟರ್ನ್‌ಅರೌಂಡ್ ಯೋಜನೆಯನ್ನು ಮುಂದುವರಿಸಲು ಬಯಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ವೇತನ ಹೆಚ್ಚಳ ಮತ್ತು ಬೋನಸ್ ಘೋಷಿಸಲಾಗಿದೆ ಎಂದು ಹೇಳಲಾಗಿದೆ.