ಶಹಾಬಾದ ದಲ್ಲಿ ಲಿಂ‌.ಬಸವಪ್ರೀಯ ಅಪ್ಪಣ್ಣ ನವರ16 ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಕನಸಿನ ಭಾರತ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಶಹಾಬಾದ ದಲ್ಲಿ ಲಿಂ‌.ಬಸವಪ್ರೀಯ ಅಪ್ಪಣ್ಣ ನವರ16 ನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಪೂಜ್ಯರ ಸಮ್ಮುಖದಲ್ಲಿ ಕನಸಿನ ಭಾರತ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

Share

ಶಹಾಬಾದ:– ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಬಸವೇಶ್ವರ ನಗರದಲ್ಲಿ ಇರುವ ಶರಣ ನಿಜಸುಖಿ ಹಡಪದ ಅಪ್ಪಣ್ಣ ನವರ ದೇವಸ್ಥಾನದಲ್ಲಿ ಶ್ರೀ ಷ.ಬ್ರ. ಶ್ರೀ ಸೋಮಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಕಂಬಳೇಶ್ವರ ಮಠ ಚಿತ್ತಾಪುರ, ಮತ್ತು ಶ್ರೀ ಸಂಗನ ಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ದಂಡಗುಂಡ ಪೂಜ್ಯರು, ಶ್ರೀ ಕೊತ್ತಲಪ್ಪ ಮುತ್ಯಾ ತೋನಸನಹಳ್ಳಿ (ಎಸ್.) ಪೂಜ್ಯರು, ಹಾಗೂ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಮಠ ಯರಗೋಳ ಪೂಜ್ಯರು , ಶ್ರೀ ಬಸವರಾಜ ಮುತ್ಯಾ ದೇವಿ ಆರಾಧಕರು ಕೆಂಬಾವಿ, ಮತ್ತು ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು ಶಹಾಬಾದ, ಸಮ್ಮುಖದಲ್ಲಿ ಕನಸಿನ ಭಾರತ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಲಿಂ.ಬಸವಪ್ರೀಯ ಅಪ್ಪಣ ನವರು ಹಡಪದ ಅಪ್ಪಣ್ಣ ಸಮಾಜಕ್ಕೆ ಸ್ವಲ್ಪ ದಿನದಲಿಯೇ ಸಮಾಜವನ್ನು ಜ್ಯೋತಿ ಯಾತ್ರೆ ಯ ಮೂಲಕ ಇಡೀ ರಾಜ್ಯ ಕರ್ನಾಟಕ. ಆಂಧ್ರ, ಮಹಾರಾಷ್ಟ್ರ, ಗೋವಾ ಹೀಗೆ ಅನೇಕ ರಾಜ್ಯದಲ್ಲಿ ಸಂಚಾರ ಮಾಡುತ್ತಾ ಸಮಾಜದ ಜನರನ್ನು ಸಂಘಟನೆಯ ಕಡೆಗೆ ಹೆಚ್ಚು ಹೊತ್ತು ನೀಡಿ ಸಮಾಜದ ಜನರಲ್ಲಿ ಸಂಘಟನಾತ್ಮಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿ, ಸಮಾಜದ ಅನೇಕ ಬೇಡಿಕೆಯನ್ನು ಇಡೇರಿಸುವಂತೆ ಆಗ ಸರ್ಕಾರದ ವಿರುದ್ಧ ಹೋರಾಟ ನಡೆಸಿ. ಸಮಾಜದ ಜನರಿಗೆ ಸಂಘಟನೆ ಬಗ್ಗೆ ಆಶೀರ್ವಚ ನೀಡಿದ ಶರಣ ಜೀವನ ಚರಿತ್ರೆಯನ್ನು ಒಂದು ಪುಟ ಪತ್ರಿಕೆಯಲ್ಲಿ ಪ್ರಕಟಿಸಿ ಈ ಕನಸಿನ ಭಾರತ ಪತ್ರಿಕೆಯ ಸಂಪಾದಕರು ರಮೇಶ್ ಎಸ್.ಜಿ ಸರ‌ ಮತ್ತು ಗಂಗಾಧರ ಎಸ್, ವ್ಯವಸ್ಥಾಪಕರು, ಮತ್ತು ಶ್ರೀಮತಿ ಶಾರದ ಎಂ ಸಹಾಯಕ ವ್ಯವಸ್ಥಾಪಕರು ಬೆಂಗಳೂರು ಇವರ ಸಹಯೋಗದಲ್ಲಿ ಈ ಕನಸಿನ ಭಾರತ್ ಕನ್ನಡ ದಿನ ಪತ್ರಿಕೆಯ ಪಿ.ಡಿ.ಎಫ್ ಪೈಲ್ ಪೇಪರ್ ಮತ್ತು ವಾರ ಪತ್ರಿಕೆ ,ಹಾಗೂ ಮಾಸ್ ಪತ್ರಿಕೆಯನ್ನು ಪ್ರಕಟಿಸಲಾಗುತ್ತದೆ , ಈ ಎಲ್ಲಾ ರೀತಿಯ ಅನೇಕ ಸುದ್ದಿಯನ್ನು (ವರದಿಗಳು ) ಸಹ ಕನಸಿನ ಭಾರತ ಕನ್ನಡ ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿ ಪ್ರಸಾರ ಮಾಡಲಾಯಿತು, ಹೀಗೆ ಈ ನಮ್ಮ ಕಲ್ಯಾಣ ಕರ್ನಾಟಕ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕು ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಈ ಕನಸಿನ ಭಾರತ ಕನ್ನಡ ದಿನ ಪತ್ರಿಕೆಯ ನ್ನು ಪೂಜ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿ. ಈ ಪತ್ರಿಕೆಯ ಜಾಹೀರಾತು ಈ ಪತ್ರಿಕೆಯ ಪ್ರಚಾರವನ್ನು , ಮತ್ತು ಕನಸಿನ ಭಾರತ ಪತ್ರಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ನಿಮ್ಮ ವರದಿಗಾರರು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಈ ರೀತಿಯಲ್ಲಿ ಪತ್ರಿಕೆಯನ್ನು ಪೂಜ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ್ದರು. ಪೂಜ್ಯರು ಈ ಪತ್ರಿಕೆ ಇಡೀ ರಾಜ್ಯಾದ್ಯಂತ ವ್ಯಾಪಿಸಿ ಈ ನಾಡಿನ ಅಂಕು ಡೊಂಕು ಗಳನ್ನು ತಿದ್ದುವ ಕೆಲಸ ಈ ಪತ್ರಿಕೆ ಮಾಡಲಿ ಎಂದು ಈ ಪತ್ರಿಕೆಗೆ ಶುಭ ಹಾರೈಸಿದ್ದರು. ಈ ಸಂಧರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಬಸವರಾಜ ಹಳ್ಳಿ, ಜಿಲ್ಲಾಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ, ಜಿಲ್ಲಾ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಶಿಕ್ಷಕರು ಕಿರಣಗಿ, ಜಿಲ್ಲಾ ಕಾರ್ಯದರ್ಶಿ ರಮೇಶ್ ನೀಲೂರ, ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಿ ಹಡಪದ. ಸುಗೂರ ಎನ್ , ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ , ಕಲಬುರಗಿ ತಾಲೂಕಾಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ಪ್ರ.ಕಾರ್ಯದರ್ಶಿ ವಿನೋದ ಅಂಬಲಗಾ, ತಾ ಉಪಾಧ್ಯಕ್ಷರು ಶ್ರೀಶೈಲ ಕಿರಣಗಿ, ಶಹಾಬಾದ ತಾಲೂಕು ಉಪಾಧ್ಯಕ್ಷರು ಶಿವಲಿಂಗ ಹಡಪದ, ಶಿವಕುಮಾರ್ ಮಾರಡಗಿ, ಪ್ರಕಾಶ ಹಡಪದ ಮಲಕೋಡ್, ತೋಟೇಂದ್ರ ಹಡಪದ ಚನ್ನೂರ, ಸೇರಿದಂತೆ ಅನೇಕರು ಈ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಅನೇಕ ಸಮಾಜದ ಬಂಧುಗಳು ಮಹಿಳಾ ತಾಯಂದಿರು ಉಪಸ್ಥಿತರಿದ್ದರು,
ವರದಿಗಾರರು- ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್.


Share