ಗೋಕಾಕ್ ನಗರ ಪೋಲಿಸರು ಸೆಂಟ್ರಲ್ ಇಕ್ವಿಪ್ಟೆಂಟ್ ಐಡೆಂಟಿಟಿ ರಿಜಿಸ್ಟರ್ (CEIR)ಮೂಲಕ ಕಳೆದು ಹೋದ, ಸುಲಿಗೆಯಾಗಿದ್ದ 39 ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಇಂದು ಹಸ್ತಾಂತರಿಸಿದ್ದಾರೆ.ನಗರ ಠಾಣಾ ವ್ಯಾಪ್ತಿಯಲ್ಲಿ ಕಳವು ಆಗಿದ್ದ 39 ಮೊಬೈಲ್ ಫೋನ್‌ಗಳನ್ನು ಸಿಐಇಆರ್ ಪೋರ್ಟಲ್ ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚಲಾಗಿದೆ.ಈ ಫೋನ್‌ಗಳನ್ನು ಗೋಕಾಕ್ ಸಿಪಿಐ ಗೋಪಾಲ್ ರಾಥೋಡ್ ಹಾಗು ಪಿಎಸ್‌ಐ ಕೆ ವಾಲೀಕರ್ ಇಂದು ವಾರಸುದಾರರಿಗೆ ಹಸ್ತಾಂತರಿಸಿದರು.