ಭಾರತೀಯ ಜನತಾಪಕ್ಷ ಕಾರವಾರ ನಗರ ಮಂಡಲ ವತಿಯಿಂದ ಬಲಿದಾನ್ ದಿನ ಆಚರಣೆ

ಭಾರತೀಯ ಜನತಾಪಕ್ಷ ಕಾರವಾರ ನಗರ ಮಂಡಲ ವತಿಯಿಂದ ಬಲಿದಾನ್ ದಿನ ಆಚರಣೆ

Share

ದಿನಾಂಕ 23/6/24 ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ :ಶಾಮಪ್ರಸಾದ್ ಮುಖರ್ಜಿ ಯವರ ಬಲಿದಾನ ದಿವಸವನ್ನು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಣೆಯೊಂದಿಗೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಶ್ರೀ ನಾಗೇಶ್ ಕುರುಡೇಕರ್, ಪಕ್ಷದ ಮುಖಂಡರು ಶ್ರೀ ಮನೋಜ್ ಭಟ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು. ಡಾಕ್ಟರ್ ಶಾಮ ಪ್ರಸಾದ್ ಮುಖರ್ಜಿ ಅವರ ಜೀವನ ಚರಿತ್ರೆ ಕುರಿತು ಸವಿಸ್ತಾರವಾಗಿ ಚರ್ಚಿಸಿ ಒಂದು ಸಂವಿಧಾನ, ಒಂದು ಗುರುತು, ಒಂದು ವಿಧಾನದ ಹಾಗೂ ಆರ್ಟಿಕಲ 370 ರದ್ದತಿಯ ಕನಸನ್ನು ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ನನಸಾಗಿಸಿದ್ದಾರೇ ಎಂದು ತೀಳಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಡಿ ಎಸ್ ಕತ್ರಿಕರ್ ಹಾಗೂ ಶ್ರೀ ಅಶೋಕ್ ಗೌಡ ರವರು ವಂದನಾರ್ಪಣೆ ನೀಡಿ ಕಾರ್ಯಕ್ರಮದಲ್ಲಿ ಡಾ: ಶಾಮ ಪ್ರಸಾದ್ ಮುಖರ್ಜಿ ಅವರ ಸ್ಮೃತಿಗಾಗಿ ಕಾರ್ಯಕರ್ತರಿಂದ ವೃಕ್ಷವನ್ನು ರೋಹಣ (ಹಚ್ಚುವ) ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ನಗರಸಭೆ ಸದಸ್ಯರು, ಮಹಾಶಕ್ತಿ ಶಕ್ತಿ ಕೇಂದ್ರ ಅಧ್ಯಕ್ಷರು, ಮೋರ್ಚಾ ದವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..


Share