IPL 2024: ಅಭಿಮಾನಿಗಳ ದುರಂಹಕಾರವೇ RCB ಸೋಲಿಗೆ ಕಾರಣ: ಮಾಜಿ ಕ್ರಿಕೆಟಿಗ Kris Srikkanth

IPL 2024: ಅಭಿಮಾನಿಗಳ ದುರಂಹಕಾರವೇ RCB ಸೋಲಿಗೆ ಕಾರಣ: ಮಾಜಿ ಕ್ರಿಕೆಟಿಗ Kris Srikkanth

Share

ಚೆನ್ನೈ: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಅಭಿಮಾನಿಗಳ ದುರಂಹಕಾರವೇ ಕಾರಣ ಎಂದು ತಮಿಳುನಾಡು ಮೂಲದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.

ಐಪಿಎಲ್​ 17ನೇ (IPL 2024 ) ಆವೃತ್ತಿಯ ಲೀಗ್ ಹಂತದ ಕೊನೆಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಹಂತಕ್ಕೆ ಏರಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಾದ ಲೀಗ್​​ ಪಂದ್ಯದಲ್ಲಿ ಆರ್​ಸಿಬಿ ಅಸಾಧಾರಣ ಪ್ರದರ್ಶನ ನೀಡಿ ಆ ಪಂದ್ಯವನ್ನೂ ಗೆದ್ದು ಪ್ಲೇ ಆಫ್ ಹಂತಕ್ಕೇರಿತು.

ಅದೇ ಹುಮ್ಮಸ್ಸಿನಲ್ಲಿ ಪ್ಲೇ ಆಫ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಕ್ವಾಲಿಫೈಯರ್ 2ಗೆ ಪ್ರವೇಶ ಪಡೆಯುವ ಹುಮ್ಮಸ್ಸಿನಲ್ಲಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ತಾನ ವಿರುದ್ಧ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ.ಆರ್ ಸಿಬಿ ಸೋಲಿಗೆ ಅಭಿಮಾನಿಗಳ ದುರಂಹಕಾರವೇ ಕಾರಣ

ಆರ್​​ಸಿಬಿ ಈ ಸೋಲಿಗೆ ದುರಂಹಕಾರವೇ ಕಾರಣ ಎಂಬುದಾಗಿ ತಮಿಳುನಾಡು ಮೂಲದ ಮಾಜಿ ಆಟಗಾರ ಹೇಳಿದ್ದು, ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಗ್ಗೆ ಮಾತನಾಡಿರುವ ಕ್ರಿಸ್ ಶ್ರೀಕಾಂತ್, ”ಆರ್​ಸಿಬಿಯ ಅಭಿಮಾನಿಗಳ ದುರಂಹಕಾರವೇ ಪ್ಲೇಆಫ್​ನ ಸೋಲಿಗೆ ಕಾರಣ. ಆರ್​ಸಿಬಿ ಅಭಿಮಾನಿಗಳು ಆದಷ್ಟು ಮೌನವಾಗಿರಬೇಕು. ಸಿಎಸ್​ಕೆ ತಂಡವನ್ನು ಸೋಲಿಸಿದ ನಂತರ ಅನಗತ್ಯ ವೀಡಿಯೊ ಪೋಸ್ಟ್ ಮಾಡಬಾರದಾಗಿತ್ತು ಎಂದು ಹೇಳಿದ್ದಾರೆ.

ಅಲ್ಲದೆ ಸಿಎಸ್​ಕೆ ತಂಡವನ್ನು ಸೋಲಿಸಿದ ನಂತರ ಫ್ರ್ಯಾಂಚೈಸಿಯ ಆಟಗಾರರು ಮತ್ತು ಅಭಿಮಾನಿಗಳ ಜಂಭ ಹೆಚ್ಚಾಗಿತ್ತು. ಅದುವೇ ಎಲಿಮಿನೇಟರ್ ನಲ್ಲಿ ಆರ್​ಆರ್​​ ವಿರುದ್ಧ ಸೋಲಿಗೆ ಕಾರಣ. ಜೀವನದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬಾಯಿ ಮುಚ್ಚಿಕೊಂಡಿರಿ.

ನೀವು ಮಾಡುತ್ತಿರುವ ಯಾವುದೇ ಕೆಲಸದ ವೇಳೆ ಗದ್ದಲ ಮಾಡಿದಾಗ ಆ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಿಲ್ಲ. ಆರ್​​ಸಿಬಿ ಅಭಿಮಾನಿಗಳು ಅನಗತ್ಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಅತಿಯಾಗಿ ತೋರಿಸುತ್ತಿದ್ದರು. ಅದಕ್ಕಾಗಿಯೇ ಅಶ್ವಿನ್ ಮುಂದಿನ ಪಂದ್ಯದಲ್ಲಿ ಆರ್​ಸಿಬಿಯ ಜಂಭ ಇಳಿಸಿದರು. ಅದಕ್ಕಾಗಿಯೇ ಕ್ರಿಕೆಟ್​​ನಲ್ಲಿ ನಿಮ್ಮ ಬಾಯಿ ಮುಚ್ಚಿ ಆಡಬೇಕು ಎಂದು ಶ್ರೀಕಾಂತ್ ಹೇಳಿದ್ದಾರೆ.ಟೀಕೆಗಳನ್ನು ಸ್ವೀಕರಿಸಿ

ಆರ್​ಸಿಬಿ ಆಟಗಾರರು ಚಪ್ಪಾಳೆಗಳನ್ನು ಸ್ವೀಕರಿಸುವಂತೆಯೇ ಟೀಕೆಗಳನ್ನೂ ಸ್ವೀಕರಿಸಿ. ಸತತ ಆರು ಗೆಲುವನ್ನು ಆರ್ ಸಿಬಿ ತಂಡ ಅತಿಯಾಗಿ ಸಂಭ್ರಮಿಸಲು ಪ್ರಾರಂಭಿಸಿತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಗತ್ಯವಿಲ್ಲದ ಆಕ್ರಮಣಶೀಲತೆಯನ್ನು ತೋರಿಸಿತು. ನೀವು ಉತ್ತಮವಾಗಿ ಆಡಿದ್ದರೆ, ಅಭಿನಂದನೆಗಳು, ನೀವು ಕಳಪೆಯಾಗಿ ಆಡಿದ್ದರೆ ಟೀಕೆಗಳನ್ನು ಸ್ವೀಕರಿಸಿ.

ನೀವು ಎಂದಿಗೂ ಬಾಯಿ ತೆರೆದು ಆಕ್ರಮಣಶೀಲತೆಯನ್ನು ತೋರಿಸಬಾರದು. ಸಿಎಸ್​​ಕೆ ಮತ್ತು ಮುಂಬೈ ಎರಡೂ ಪ್ರಶಸ್ತಿಗಳನ್ನು ಗೆದ್ದಿವೆ. ಆದರೆ ಎಂದಿಗೂ ಸದ್ದು ಮಾಡಿಲ್ಲ. ಆದರೆ ಆರ್​ಸಿಬಿ ಆರು ಪಂದ್ಯಗಳನ್ನು ಗೆದ್ದಿತು. ಅವರು ಅರ್ಹತೆ ಪಡೆದ ತಕ್ಷಣ ಅವರು ಔಟ್ ಆಗಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ.


Share