ಡ್ರೈನೇಜ್ (ಯುಜಿಡಿ) ನೀರನ್ನು ಬಿಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ – ಅಲಿವೇಲು ಸುರೇಶ್

ಡ್ರೈನೇಜ್ (ಯುಜಿಡಿ) ನೀರನ್ನು ಬಿಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ – ಅಲಿವೇಲು ಸುರೇಶ್

Share

ಬಳ್ಳಾರಿಯ ಹೊನ್ನಳ್ಳಿ ,ಗುಗ್ಗರಹಟ್ಟಿ, ಕಾಕಾರ್ಲತೋಟ, ಇಂದ್ರನಗರ್, ಅಂದ್ರಾಳ್,ಗೋನಾಳ್ ವರೆಗೆ ಹರಿಯುವ ನೈಸರ್ಗಿಕ ಹಳ್ಳಕ್ಕೆ ಕೌಲ್ ಬಜಾರ್ ಪ್ರದೇಶದಿಂದ ಮತ್ತು ಗುಗ್ಗರಹಟ್ಟಿ, ಕಾಕಾರ್ಲತೋಟ ,ಎಪಿಎಂಸಿ, ಮೃತ್ಯುಂಜಯನಗರ, ಇಂದ್ರಾನಗರ ,ಬಳ್ಳಾರಪ್ಪ ಕಾಲೋನಿ, ಆರ್ ಆರ್ ಕಾಲೋನಿ, ಮತ್ತಿತರ ಪ್ರದೇಶಗಳಿಂದ ನೈಸರ್ಗಿಕ ಹಳ್ಳಕ್ಕೆ ಚರಂಡಿ ಡ್ರೈನೇಜ್ (ಯುಜಿಡಿ) ನೀರನ್ನು ಬಿಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಏಕೆಂದರೆ ಈ ಹಳ್ಳಕ್ಕೆ ಅಂಟಿಕೊಡಿರುವ ಹಲವಾರು ಬಡಜನರ ಮತ್ತು ಮಾಧ್ಯಮ ವರ್ಗದವರ ಮನೆಗಳು ಇರುವುದರಿಂದ ಹಾಗು ಮಳೆಗಾಲ ಇರುವುದರಿಂದ ಡೆಂಗ್ಯೂ ಜ್ವರ, ಧುರ್ವಾಸನೆ, ಹುಳ ಹುಪ್ಪಡಿ, ಸೊಳ್ಳೆ ಕಡಿತದಿಂದ ಇನ್ನೂ ಹಲವಾರು ರೋಗ ರುಜನೆಗಳು ಬರುತ್ತಿವೆ ಎಂದು ಕಾಂಗ್ರೆಸ್ ಮುಖಂಡ, ಸಮಾಜ ಸೇವಕ, ಸೂರ್ಯ ಕಲಾ ಮತ್ತು ಸೇವಾ ಬಳಗ ಟ್ರಸ್ಟ್ನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಕಾರಣ ಅಲ್ಲಿ ಹೆಚ್ಚಿನದಾಗಿ ವಿಷಪೂರೀತ ನೀರಿನಿಂದ ರೋಗ ಹೆಚ್ಚಾಗಿ ಹರಡುತ್ತಿರುವುದರಿಂದ ಇಂತಹ ಡ್ರೈನೇಜ್ ಚರಂಡಿ ನೀರನ್ನು, (ಹರಿಸಲು) ಹೊರಗಡೆ ಕಳುಹಿಸಲು ಪೈಪ್ ಲೈನ್ ಮೂಲಕ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲಿ ಮಾಡಬೇಕೆಂದು ಉಸ್ತುವಾರಿ ಸಚಿವರು, ಶಾಸಕರು, ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.ಇಲ್ಲವಾದಲ್ಲಿ ಬೀದಿಗಿಳಿದು ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.


Share