ವೇಗವನ್ನು ಸೆರೆಹಿಡಿಯಲು ಬಂದಿದೆ ಹೊಸ ತಂತ್ರಜ್ಞಾನದ ಸ್ಪೀಡ್ ಲೇಸರ್ ರಾಡರ್ ಗನ್,ನಿಗಧಿತ ವೇಗಕ್ಕಿಂತ ಸ್ಪೀಡಾಗಿ ವಾಹನ ಚಲಾಯಿಸಿದರೇ ದಂಡ ಖಚಿತ-ಅಯ್ಯನಗೌಡ ಪಾಟಿಲ್

ವೇಗವನ್ನು ಸೆರೆಹಿಡಿಯಲು ಬಂದಿದೆ ಹೊಸ ತಂತ್ರಜ್ಞಾನದ ಸ್ಪೀಡ್ ಲೇಸರ್ ರಾಡರ್ ಗನ್,ನಿಗಧಿತ ವೇಗಕ್ಕಿಂತ ಸ್ಪೀಡಾಗಿ ವಾಹನ ಚಲಾಯಿಸಿದರೇ ದಂಡ ಖಚಿತ-ಅಯ್ಯನಗೌಡ ಪಾಟಿಲ್

Share

ಬಳ್ಳಾರಿ ನಗರದಲ್ಲಿ ನಿಗಧಿಸಿದ ವೇಗಗಿಂತ ಹೆಚ್ಚು ಸ್ಪೀಡ್‌ನಲ್ಲಿ ವಾಹನಗಳನ್ನು ಚಲಾಯಿಸಿದರೇ ನಿಮ್ಮ ವಾಹನ ಸಮೇತ ಪೋಟೋವನ್ನು ಸೆರೆಹಿಡಿಯಲು ಮತ್ತು ದಂಡ ವಿಧಿಸಲು ಸ್ಪೀಡ್ ಲೇಸರ್ ರಾಡರ್ ಗನ್ ಬಂದಿದೆ ಎಂದು ಅಯ್ಯನಗೌಡ ಪಾಟೀಲ್, ಪಿಐ, ಸಂಚಾರಿ ಪೋಲೀಸ್ ಠಾಣೆ ಬಳ್ಳಾರಿ ಇವರು ನಮ್ಮ ಪತ್ರಿಕೆಯ ಪ್ರತಿನಿಧಿಯೊಂದಿಗೆ ಚರವಾಣಿಯಲ್ಲಿ ತಿಳಿಸಿದ್ದಾರೆ.ಅತಿ ವೇಗದಿಂದ ಸಂಭವಿಸುವ ಅಪಘಾತಗಳನ್ನು ತಡೆಯಲು ರಸ್ತೆಗಳಲ್ಲಿ ವೇಗದ ಮಿತಿಯ ಫಲಕಗಳನ್ನು ಅಳವಡಿಸಿದ್ದರೂ, ಲೆಕ್ಕಿಸದೆ ವಾಹನ ಸವಾರರು ಮಿತಿಮೀರಿದ ವೇಗದಲ್ಲಿ ಸಂಚರಿಸಿವುದನ್ನು ತಡೆಯಲು ಈ ಮೊದಲು ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ದಂಡ ಹಾಕುವಾಗ ನಾನು ಹೆಚ್ಚು ಸ್ಪೀಡನಲ್ಲಿ ಬಂದಿಲ್ಲ ಎಂಬ ವಾದ ವಿವಾದಗಳು ನಡೆಯುತ್ತಿದ್ದವು. ಈ ಸಮಸ್ಯೆ ನಿವಾರಣೆಗೆಂದು ಇಂಟರ್ ಸೆಫ್ಟರ್ ವಾಹನಗಳ ಮೂಲಕ ಅತಿವೇಗಲ್ಲಿ ಬರುವ ವಾಹನಗಳನ್ನು ಪೋಟೋ ದಾಖಲೆ ಸಮೇತ ದಂಡ ವಿಧಿಸುವ ಕಾರ್ಯ ಕಳೆದ ಒಂದು ದಶಕದಿಂದಲೂ ನಡೆಯುತ್ತಿತ್ತು. ಈ ಕಾರ್ಯಕ್ಕೆ ಮೂರು ನಾಲ್ಕು ಜನ ಸಿಬ್ಬಂದಿ ಬೇಕಿತ್ತು ವೆಚ್ಚವೂ ಹೆಚ್ಚಾಗಿತ್ತು.
ಈಗ ಸುಧಾರಿಸಿದ ತಂತ್ರಜ್ಞಾನದಿಂದ ಎಂಟು ಲಕ್ಷ ರೂ ವೆಚ್ಚದ ಸ್ಪೀಡ್ ಲೇಸರ್ ರಾಡರ್ ಗನ್ ಬಂದಿದೆ. ಕಾಂಪ್ಯಾಕ್ಟ್ ಆಗಿರುವ ಇದನ್ನು ಇಬ್ಬರು ಸಿಬ್ಬಂದಿಯೊಂದಲೇ ನಿರ್ವಹಣೆ ಮಾಡಬಹುದು. ಇಂತಹ ಮೂರು ಕೆಮೆರಾಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತಿದ್ದಾವೆ ಎಂದು ತಿಳಿಸಿದ್ದಾರೆ.
ಇದರ ಕಾರ್ಯವೈಖರಿಯನ್ನು ಜೂ.೧೪ ರಿಂದ ನಗರದಲ್ಲಿ ನಮ್ಮ ಸಂಚಾರಿ ಪೋಲೀಸ್ ಠಾಣೆಯಿಂದ ಮಾತ್ರ ಈ ವರಗೆ ಮೀತಿ ಮೀರಿದ ವೇಗದಲ್ಲಿ ಬಂದ ೨೩೩ ಕ್ಕೂ ವಾಹನಗಳಿಗೆ ೨.೩೦ ಲಕ್ಷ ದಂಡ ವಿಧಿಸಿದ್ದೇವೆ ಎಂದರು. ನಗರದ ಹೊರ ವಲಯದ ಅಲ್ಲಿಪುರ ರಸ್ತೆ, ಸಂಗನಕಲ್ಲು ರಸ್ತೆ, ಕಪ್ಪಗಲ್ಲು ರಸ್ತೆ, ಸಿರುಗುಪ್ಪ ರಸ್ತೆಗಳಲ್ಲಿ ಮಿತಿ ಮೀರಿದ ವೇಗದಲ್ಲಿ ಬರುವ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆದಿದೆ ಎಂದರು.ಈ ರಸ್ತೆಗಳಲ್ಲಿ ಕಾರು, ಬೈಕಿಗೆ ೪೦ ಕಿ.ಮೀ, ಲಾರಿ, ಬಸ್, ಆಟೋಗಳಿಗೆ ೩೫ ಕಿ.ಮೀ ನಿಗಧಿ ಪಡಿಸಿದೆ. ಇದನ್ನು ಮೀರಿ ಬಂದ ವಾಹನಗಳಿಗೆ ಅವರು ಬರುತ್ತಿದ್ದ ವೇಗ, ಸ್ಥಳ ಸಮೇತ ದಾಖಲೆ ಈ ಲೇಸರ್ ತಂತ್ರಜ್ಞಾನದ ಯಂತ್ರದ ಮೂಲಕ ಬರುತ್ತೆ, ಇದು ೩೦೦ ಮೀಟರ್ ದೂರದಲ್ಲಿಯೇ ವೇಗದ ಮಿತಿ ಬರುವ ವಾಹನದ ದಾಖಲೆಯನ್ನು ಸೆರೆ ಹಿಡಿಯುತ್ತೆ. ಅಲ್ಲದೆ ಏಕ ಕಾಲದಲ್ಲಿ ಎರೆಡು ಮೂರು ವಾಹನಗಳು ಸಹ ವೇಗ ಮಿತಿ ಮೀರಿ ಬಂದರೂ ದಾಖಲೆ ನೀಡುತ್ತದೆ, ದೂರದಲ್ಲಿಯೇ ಬರುವ ವಾಹನ ವೇಗ ಮಿತಿ ಮೀರಿ ಬಂದುದನ್ನು ಸಿಬ್ಬಂದಿ ನೋಡಿ ಆ ವಾಹನ ಸವಾರನಿಗೆ ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಪಾವತಿಸಲು ವಾಹನದ ಮಾಲೀಕನ ಮನೆಗೆ ದಂಡದ ನೋಟೀಸ್ ತಲುಪಲಿದೆ ಎಂದರು. ಒಂದೇ ಕಡೆ ಇದ್ದರೆ ಆ ರಸ್ತೆಯಲ್ಲಿ ಮಾತ್ರ ಸವಾರರು ಜಾಗೃತರಾಗುತ್ತಾರೆ. ಒಂದೊAದು ದಿನ ಒಂದು ಕಡೆ ಇದನ್ನು ಬಳಕೆ ಮಾಡಲಾಗುತ್ತಿದೆ. ಇಂತಹ ಯಂತ್ರಗಳು ಇನ್ನಷ್ಟು ಬಂದರೆ ನಗರದ ರಸ್ತೆಗಳಲ್ಲೂ ಮಿತಿ ಮೀರಿ ಬೈಕ್ ಓಡಿಸುವ ಯುವಕರ ವರ್ತನೆಗೆ ಕಡಿವಾಣ ಹಾಕಬಹುದು ಎಂಬುದು ಜನರ ಆಶಯವಾಗಿದೆ ಎಂದರು. ಈಗಲಾದರೂ ವಾಹನ ಸವಾರರು ಹೆಚ್ಚೆತ್ತುಕೊಂಡು ವಾಹನಗಳು ಚಲಾಯಿಸಿದರೇ ಒಳಿತು,ಇಲ್ಲವಾದಲ್ಲಿ ಮುಲಾಜಿಲ್ಲದೇ ದಂಡ ವಿಧಿಸುತ್ತೇವೆ ಎಂದು ತಿಳಿಸಿದರು.


Share