ಗ್ರಾಮೀಣ ಭಾಗವೂ ಅಭಿವೃದ್ದಿಯಾದರೆ, ದೇಶವೂ ಅಭಿವೃದ್ದಿಯಾಗಲು ಸಾಧ್ಯ:ರಾಜು ಮಾಸ್ತಿಹಳ್ಳ

ಗ್ರಾಮೀಣ ಭಾಗವೂ ಅಭಿವೃದ್ದಿಯಾದರೆ, ದೇಶವೂ ಅಭಿವೃದ್ದಿಯಾಗಲು ಸಾಧ್ಯ:ರಾಜು ಮಾಸ್ತಿಹಳ್ಳ

Share

ಕುಮಟಾ:ನಮ್ಮ ಗ್ರಾಮ,ತಾಲೂಕು ಹಾಗೂ ಜಿಲ್ಲೆಯು ಅಭಿವೃದ್ದಿ ಹೊಂದಿದರೆ ಮಾತ್ರ ರಾಷ್ಟ್ರವೂ ಅಭಿವೃದ್ದಿ ಹೊಂದಿದ ರಾಷ್ಟ್ರದ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಕರವೇ ಜಿಲ್ಲಾಧ್ಯಕ್ಷರು ಹಾಗೂ ಕುಮಟಾ ಕೊ- ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ರಾಜು ಮಾಸ್ತಿಹಳ್ಳ ಅವರು ಹೇಳಿದರು.ಡಾ ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಬಿಬಿಎ ವಿಭಾಗದಲ್ಲಿ ಆಯೋಜಿಸಿದ್ದ “2047 ರಲ್ಲಿ ಭಾರತ ದೇಶವೂ ಅಭಿವೃದ್ದಿ ಹೊಂದಬಹುದೇ” ಎನ್ನುವ ವಿಷಯದ ಕುರಿತು ತಾಲೂಕಾ ಮಟ್ಟದ ಚರ್ಚಾ ಸ್ವರ್ದೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಶಿಕ್ಷಣ ಎಲ್ಲಾ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಸಂಸ್ಕಾರಯುತವಾದ ಶಿಕ್ಷಣ ಸಿಕ್ಕಿದಾಗ ಮಾತ್ರ ಭವಿಷ್ಯದಲ್ಲಿ ಉತ್ತಮವಾದ ನಾಗರಿಕರಾಗಲು ಸಾಧ್ಯವಿದೆ. ಯುವಕರು ಕಾಲೇಜಿನ ಜೀವನದಲ್ಲಿ ಕೇವಲ ಮೊಬೈಲ್, ಪ್ರೀತಿ ಪ್ರೇಮ ಎಂದು ಕಾಲ ಕಳೆಯದೆ, ಶಿಕ್ಷಣದ ಹಾಗೂ ತಮ್ಮ ಭವಿಷ್ಯದ ಗುರಿಯತ್ತ ಚಿಂತಿಸಿ ಮುನ್ನುಗ್ಗಬೇಕಿದೆ.ಸರಿಯಾದ ನಾಯಕತ್ವವನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ದೇಶವು ಪ್ರಗತಿಯತ್ತ ಸಾಗಲು ಸಾಧ್ಯವಿದೆ. ರಕ್ಷಣಾತ್ಮಕವಾಗಿ, ಆರ್ಥಿಕವಾಗಿ, ವಿಜ್ಞಾನ ತಂತ್ರಜ್ಞಾನದಲ್ಲಿ ಇನ್ನು ಸಾಕಷ್ಟು ಅಭಿವೃದ್ದಿಯಾಗಬೇಕಿದ್ದು, ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳು ಅಭಿವೃದ್ದಿಯಾದರೆ ದೇಶವು ಅಭಿವೃದ್ದಿಯತ್ತ ಸಾಗಬಹುದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ರೇವತಿ ಆರ್ ನಾಯ್ಕ ಮಾತನಾಡಿ ಇಂದಿನ ಯುವಕರು ದೇಶದ ನಾಗರಿಕರು, ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶವು ಭಾರತ, ದೇಶದಲ್ಲಿ ಅನೇಕ ನೈಸರ್ಗಿಕವಾದ ದೇಶವಾಗಿದ್ದು, ಆರ್ಥಿಕ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಪ್ರಥಮ,ದ್ವಿತೀಯ,ತೃತೀಯ ಬಹುಮಾನ ಹಾಗೂ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ರಾಜು ಮಾಸ್ತಿಹಳ್ಳ ಅವರು ವಹಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಯೂನಿಯನ್ ಅಧ್ಯಕ್ಷರಾದ ಡಾ.ಅರವಿಂದ ನಾಯಕ,  ಬಿ.ಬಿ.ಎ ವಿಭಾಗದ ಮುಖ್ಯಸ್ಥರಾದ ಫ್ರೊ.ಸಂತೋಷ ಶಾನಭಾಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಬಿ.ಎಲ್ ಶ್ರಜನ್ ಹಾಗೂ ಸಿಂಚನ ಗೌಡ ನಿರ್ವಹಿಸಿದರು.


Share