ಇಂಡಿ: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮರುಳಸಿದ್ದೇಶ್ವರ ದೇವರ ಜಾತ್ರೆ ಇದೆ ದಿನಾಂಕ 24-11-2024 ರಿಂದ 25-11-2024 ವರಿಗೆ ಶ್ರೀಮದ್ ಸದ್ಧರ್ಮ ಸಿಂಹಾಸನಾದೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಶ್ರೀಮದ್ ಉಜೈನಿ ಮಹಾಸಂಸ್ಥಾನ ಪೀಠ ಇವರ ದಿವ್ಯ ಸಾನ್ನಿಧ್ಯದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ತಡವಲಗಾ ಗ್ರಾಮದ ಹಿರೇಮಠದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.ಅವರು ಇಂದು ಇಂಡಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪೂಜ್ಯರು ರವಿವಾರ ದಿನಾಂಕ 24-11-2024 ರಂದು ಬೆಳಿಗ್ಗೆ ಹತ್ತು ಗಂಟೆಗೆ ಆರೋಗ್ಯ ಇಲಾಖೆ ವಿಜಯಪೂರ ಮತ್ತು ಸಮುದಾಯ ಆರೋಗ್ಯ ಕೇಂದ್ರ ತಡವಲಗಾ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ನಂತರ ಶ್ರೀಮತಿ ವಿದ್ಯಾ ಮಸಿಬಿನಾಳ ಹಾಗೂ ಸಂಗಡಿಗರಿಂದ ಗೀ ಗೀ ಪದಗಳು ನಡೆಯಲಿವೆ, ಸಾಯಂಕಾಲ 06-00 ಘಂಟೆಗೆ ಖ್ಯಾತ ಪುರಾಣಿಕರಾದ ಶ್ರೀ ಶಿವಾನಂದಯ್ಯ ಶಾಸ್ತ್ರಿಗಳು ಹೇಳಿಕೊಂಡು ಬರುತ್ತಿರುವ “ಅಬ್ಬೆ ತುಮಕೂರಿನ ವಿಶ್ವಾರಾಧ್ಯರ” ಪುರಾಣ ಮಹಾ ಮಂಗಲ ಕಾರ್ಯಕ್ರಮ ನಡೆಯಲಿದೆ. 25-11-2024 ರಂದು ಬೆಳಿಗ್ಗೆ 11-00 ಘಂಟೆಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ” ಯಾತ್ರಾ ನಿವಾಸ” ಹಾಗೂ ಶ್ರೀ ಮಾಹಾಲಕ್ಷ್ಮಿ “ಮಂಗಲ ಕಾರ್ಯಾಲಯದ ಭೂಮಿ ಪೂಜೆ” ಮತ್ತು ಶ್ರೀ ಮರುಳಸಿದ್ದೇಶ್ವರ “ನೂತನ ರಥ ನಿರ್ಮಾಣ”ಕ್ಕೆ ಚಾಲನೆ.ನಂತರ ಮದ್ಯಾಹ್ನ 12-30 ಘಂಟೆಗೆ “ಸರ್ವಧರ್ಮ ಸಾಮೂಹಿಕ ವಿವಾಹ” ಕಾರ್ಯಕ್ರಮ ನಡೆಯುತ್ತವೆ.ನಂತರ ಸಾಯಂಕಾಲ 07-00 ಘಂಟೆಗೆ”ಧರ್ಮಸಭೆ ಹಾಗೂ ಲಕ್ಷದಿಪೋತ್ಸವ ” ಕಾರ್ಯಕ್ರಮ ಹಾಗೂ ರಾತ್ರಿ ಹತ್ತು ಗಂಟೆಗೆ ಶ್ರೀ ಮರುಳಸಿದ್ದೇಶ್ವರ ನಾಟ್ಯ ಸಂಘ ಇವರಿಂದ “ವರದಕ್ಷಿಣೆ ಕಣ್ಣಿರು” ಅರ್ಥಾತ್ ತಗಿಬೇಡ ತಂಗಿ ತಾಳಿ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.ಈ ವರ್ಷ ನೂತನವಾಗಿ ಬೃಹತ್ ಜಾನುವಾರುಗಳ ಜಾತ್ರೆ ನಡೆಯುತ್ತದೆ.ಮತ್ತು ಉತ್ತಮ ಜಾನುವಾರುಗಳಿಗೆ ಪಶು ಸಂಗೋಪನಾ ಇಲಾಖೆ ಹಾಗೂ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಸಹಯೋಗದಲ್ಲಿ ಪಾಸ್ ವಿತರಣೆ ಮಾಡಲಾಗುವುದು.ಈ ಎಲ್ಲಾ ಕಾರ್ಯಕ್ರಮದಲ್ಲಿ ತಡವಲಗಾ ಹಿರೇಮಠದ ಶ್ರೀ ಪ್ರೀತಂ ದೇವರ ಹಾಗೂ ವಿವಿಧ ಮಠಾಧೀಶರ ಹಾಗೂ ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಹಾಗೂ ವಿಜಯಪೂರ ಲೋಕಸಭಾ ಸದಸ್ಯರಾದ ಶ್ರೀ ರಮೇಶ ಜಿಗಜಿಣಗಿ ಹಾಗೂ ಬಿಜೆಪಿ ಮುಖಂಡರಾದ ಶ್ರೀ ದಯಸಾಗರ ಪಾಟೀಲ,ಕಾಸುಗೌಡ ಬಿರಾದಾರ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲ ಹಾಗೂ ತಡವಲಗಾ ಗ್ರಾಮ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಹಾಗೂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ತಡವಲಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಈ ಎಲ್ಲಾ ಕಾರ್ಯಗಳಲ್ಲಿ ಪಾಲ್ಗೊಂಡು ಶ್ರೀ ಮರುಳಸಿದ್ದೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ತಿಳಿಸಿದ್ದಾರೆ.ಈ ಸುದ್ದಿ ಗೋಷ್ಠಿಯಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀ ತಮ್ಮಣ್ಣ ಪೂಜಾರಿ, ನಿರಂತರ ರುದ್ರಾಭಿಷೇಕ ಸಮಿತಿ ಅಧ್ಯಕ್ಷರಾದ ಅಶೋಕ (ಮಾಸ್ತರ) ಮಿರ್ಜಿ,ಸಂಪತಕುಮಾರ ಹಿಳ್ಳಿ,ರಾಮುಸಾಹುಕಾರ ರೂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
