‘ಕೌಸಲ್ಯ ಸುಪ್ರಜಾ ರಾಮಾ’ ಯಶಸ್ವಿ ಚಿತ್ರ ನೀಡಿದ ನಿರ್ದೇಶಕ ಶಶಾಂಕ್ ಮತ್ತು ನಟ ಕೃಷ್ಣ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂದು ವರದಿಯಾಗಿದೆ. ಹೊಸ ಪ್ರಾಜೆಕ್ಟ್ ಕೆಲಸ ನಡೆಯುತ್ತಿದೆ ಎಂದು ಇತ್ತೀಚಿಗೆ ತಿಳಿದುಬಂದಿದೆ.
ಕೌಸಲ್ಯ ಸುಪ್ರಜಾ ರಾಮಾ (2023) ಒಂದು ಅಭೂತಪೂರ್ವ ಕೌಟುಂಬಿಕ ಚಿತ್ರವಾಗಿತ್ತು. ನಾಗಭೂಷಣ್ ಜೊತೆಗೆ ಮಿಲನಾ ನಾಗರಾಜ್ ಮತ್ತು ಬೃಂದಾ ಆಚಾರ್ಯ ಅವರು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಚಿತ್ರಕ್ಕೆ ಪ್ರೇಕ್ಷಕರಿಗೆ ಮನಸೋತಿದ್ದರು.ಆದರೆ, ಈ ಬಾರಿ ನಿರ್ದೇಶಕರು ಕೃಷ್ಣ ಅವರಿಗಾಗಿ ಥ್ರಿಲ್ಲಿಂಗ್ ಚಿತ್ರ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ ಸ್ಕ್ರಿಪ್ಟ್ ರಚಿಸುತ್ತಿರುವ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಹೊಸದಾಗಿ ತೋರಿಸುವ ಗುರಿ ಹೊಂದಿದ್ದಾರೆ. ಈ ಸುದ್ದಿಯನ್ನು ಶಶಾಂಕ್ ಖಚಿತಪಡಿಸಿದ್ದಾರೆ. ಈ ಬಾರಿ ಥ್ರಿಲ್ಲರ್ ಚಿತ್ರಕ್ಕಾಗಿ “ಕೃಷ್ಣ ಮತ್ತು ನಾನು ಮತ್ತೆ ಒಂದಾಗುತ್ತಿದ್ದೇವೆ. ನಿರ್ದೇಶಕನಾಗಿ ನನಗೆ ಮತ್ತು ನಟನಾಗಿ ಕೃಷ್ಣನಿಗೆ ಇದು ಹೊಸ ಪರಿಕಲ್ಪನೆ. ಇದು ನಟನ ಹಿಂದೆಂದೂ ನೋಡಿರದ ಭಾಗವನ್ನು ಅನಾವರಣಗೊಳಿಸುವ ಭರವಸೆ ನೀಡುತ್ತದೆ ಎಂದು ಹೇಳಿದರು.
ಈ ಮಧ್ಯೆ , ಕೃಷ್ಣ ಆರ್‌ಸಿ ಸ್ಟುಡಿಯೋಸ್ ನಿರ್ಮಿಸಿರುವ ಫಾದರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇದರಲ್ಲಿ ಪ್ರಕಾಶ್ ರಾಜ್ ಮತ್ತು ತೆಲುಗು ನಟ ಸುನೀಲ್ ಸಹ ನಟಿಸಿದ್ದಾರೆ. ಜುಲೈನಲ್ಲಿ ಫಾದರ್ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದ್ದು, ಶೀಘ್ರದಲ್ಲೇ ಶಶಾಂಕ್ ಅವರ ಚಿತ್ರಕ್ಕೆ ಧುಮುಕಲಿದ್ದಾರೆ, ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.