ರಾಜಸ್ಥಾನದಲ್ಲಿ Heatwave: ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ BSF ಯೋಧ!: ವಿಡಿಯೋ ವೈರಲ್

ರಾಜಸ್ಥಾನದಲ್ಲಿ Heatwave: ಮರಳಿನಲ್ಲಿ ಹಪ್ಪಳ ರೋಸ್ಟ್ ಮಾಡಿದ BSF ಯೋಧ!: ವಿಡಿಯೋ ವೈರಲ್

Share

ಬಿಕಾನೆರ್‌: ಉತ್ತರ ಭಾರತದಲ್ಲಿ Heat wave ತೀವ್ರಗೊಂಡಿದ್ದು, ರಾಜಸ್ಥಾನದಲ್ಲಿ ವರದಿಯಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ರಾಜಸ್ಥಾನದ ಬಿಕಾನೆರ್‌ ನಲ್ಲಿ ಬಿಎಸ್ ಎಫ್ ಯೋಧರೊಬ್ಬರು ಸುಡು ಬಿಸಿಲಿನಲ್ಲಿ ಮರಳ ಮೇಲೆ papad roast (ಹಪ್ಪಳ ಹುರಿದಿರುವುದು) ಮಾಡಿದ್ದಾರೆ.

ಖಾಜುವಾಲದ ಬಳಿ ಇರುವ ಭಾರತ-ಪಾಕ್ ಗಡಿಯಲ್ಲಿ ಈ ದೃಶ್ಯ ಕಂಡುಬಂದಿದ್ದು, ಪ್ರದೇಶದಲ್ಲಿ Heat wave ನ ತೀವ್ರತೆಯನ್ನು ತೋರುತ್ತಿದೆ.ಈ ಪ್ರಮಾಣದ ಬಿಸಿಲಿನಲ್ಲಿಯೂ ಬದ್ಧತೆಯಿಂದ ದೇಶದ ರಕ್ಷಣೆ ಮಾಡುತ್ತಿರುವ ಯೋಧರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಧನ್ಯವಾದ ತಿಳಿಸಿದ್ದಾರೆ.

ದೇಶದಾದ್ಯಂತ ಜನರು ಸುಡುವ ಶಾಖದಿಂದ ಬಳಲುತ್ತಿದ್ದಾರೆ. ಬಿಸಿಲಿನಿಂದ ತಪ್ಪಿಸಿಕೊಳ್ಳುವುದಕ್ಕೆ ಪರಿಹಾರಕ್ಕಾಗಿ ಹವಾನಿಯಂತ್ರಣ ಮತ್ತು ಕೂಲರ್‌ಗಳಂತಹ ಆಧುನಿಕ ಸೌಕರ್ಯಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ ಈ ಸೈನಿಕರು ಪಟ್ಟುಬಿಡದೇ ನಮ್ಮ ತಾಯ್ನಾಡಿನ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ಬಿಕಾನೆರ್‌ ನಲ್ಲಿ 47 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ.


Share