ಬ್ಯಾಂಕಾಕ್: ಪ್ರತಿಕೂಲ ಹವಾಮಾನದಿಂದ ಮಾರ್ಗಮಧ್ಯೆ ಕುಸಿದ ಲಂಡನ್-ಸಿಂಗಪುರ ವಿಮಾನದಲ್ಲಿನ ಪ್ರಯಾಣಿಕರ ಪೈಕಿ ಮೂವರು ಭಾರತೀಯರಿದ್ದರು ಎಂದು ತಿಳಿದುಬಂದಿದೆ.
ಈ ವಿಮಾದಲ್ಲಿ ಒಟ್ಟು 229 ಮಂದಿ ಪ್ರಯಾಣಿಕರಿದ್ದರು. 37,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದ್ದ ಬೋಯಿಂಗ್ ವಿಮಾನ, ಬಿರುಗಾಳಿಗೆ ಸಿಲುಕಿ, ಹಠಾತ್ತನೆ ಕೆಲವು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ಕೆಳಕ್ಕೆ ಇಳಿದಿತ್ತು.ಪರಿಣಾಮ ಘಟನೆಯಲ್ಲಿ 73 ವರ್ಷದ ಬ್ರಿಟೀಷ್ ವ್ಯಕ್ತಿ ಸಾವನ್ನಪ್ಪಿದ್ದು 24 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತೀವ್ರ ಹೃದಯಾಘಾತದಿಂದ ಬ್ರಿಟನ್ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆಯಿಂದಾಗಿ ವಿಮಾನ ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಸುವರ್ಣಭೂಮಿ ವಿಮಾನ ನಿಲ್ದಾಣದಿಂದ ಸುಮಾರು 20 ಕಿಲೋಮೀಟರ್ (12 ಮೈಲುಗಳು) ದೂರದಲ್ಲಿರುವ ಸಮಿತಿವೇಜ್ ಶ್ರೀನಕರಿನ್ ಆಸ್ಪತ್ರೆಯ ತುರ್ತು ಸಿಬ್ಬಂದಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ರನ್‌ವೇಯಿಂದ ಹೀಥ್ರೂದಿಂದ SQ321 ಫ್ಲೈಟ್‌ನಿಂದ ವರ್ಗಾಯಿಸಿದ್ದಾರೆ.