ಹೇಮಂತ್ ಸೋರೆನ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ: ಬಂಧನ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಮಾಜಿ ಸಿಎಂ

ಹೇಮಂತ್ ಸೋರೆನ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ: ಬಂಧನ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಮಾಜಿ ಸಿಎಂ

Share

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸಿಕ್ಕಂತೆ ತಮಗೂ ಜಾಮೀನು ಸಿಗುತ್ತದೆ ಎಂದು ಭಾವಿಸಿದ್ದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗೆ ಭಾರೀ ಮುಖಭಂಗವಾಗಿದ್ದು ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಮಾಜಿ ಸಿಎಂ ಸೊರೆನ್ ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ಅರ್ಜಿ ಸಲ್ಲಿಸುವ ಕುರಿತು ಸತ್ಯವನ್ನು ಮುಚ್ಚಿಟ್ಟಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಸುಪ್ರೀಂ ಕೋರ್ಟ್ ಇಂದು ತರಾಟೆಗೆ ತೆಗೆದುಕೊಂಡಿದ್ದು, ಜಾರಿ ನಿರ್ದೇಶನಾಲಯದ ಬಂಧನವನ್ನು ಪ್ರಶ್ನಿಸಿ ಜೆಎಂಎಂ ನಾಯಕ ತನ್ನ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ರಜಾಕಾಲದ ಪೀಠವು ಪ್ರಕರಣದ ವಿವರಗಳಿಗೆ ಆಳವಾಗಿ ಹೋದರೆ ಸೊರೆನ್ ಗೆ ‘ತೊಂದರೆ ಆಗುತ್ತದೆ’ ಎಂದು ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ ನಂತರ ಅರ್ಜಿ ಹಿಂಪಡೆಯಲು ಸೊರೆನ್ ಅವರ ವಕೀಲ, ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಅವಕಾಶ ನೀಡಿತ್ತು.

ನಿಮ್ಮ ನಡವಳಿಕೆಯು ಪರಿಮಾಣವನ್ನು ಹೇಳುತ್ತದೆ. ನಿಮ್ಮ ಕಕ್ಷಿದಾರ ಪ್ರಾಮಾಣಿಕವಾಗಿ ಮುಂದೆ ಬರಬೇಕೆಂದು ನಾವು ನಿರೀಕ್ಷಿಸಿದ್ದೇವೆ. ಆದರೆ ನೀವು ಪ್ರಮುಖ ಸಂಗತಿಗಳನ್ನು ಮರೆ ಮಾಚಿದ್ದಾರೆ. ಕಸ್ಟಡಿಯಲ್ಲಿರುವ ಕಾರಣ ಸೋರೆನ್ ಅವರ ಪರವಾಗಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ತಿಳಿದಿರಲಿಲ್ಲ ಎಂದು ಸಿಬಲ್ ಪ್ರತಿವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ನಿಮ್ಮ ನಡವಳಿಕೆ ದೋಷರಹಿತವಾಗಿಲ್ಲ’ ಎಂದು ಹೇಳಿದರು.ಸೋರೆನ್ ಅವರ ರಾಜಕೀಯ ಸ್ಥಾನಮಾನಕ್ಕೆ ಒತ್ತು ನೀಡಿದ ಪೀಠ, ‘ಅವರು ಸಾಮಾನ್ಯ ವ್ಯಕ್ತಿಯಲ್ಲ’ ಎಂದು ಟೀಕಿಸಿದರು. ಪ್ರಕರಣದ ಅರ್ಹತೆಯನ್ನು ಪರಿಗಣಿಸದೆ ಅರ್ಜಿಯನ್ನು ವಜಾಗೊಳಿಸುವ ಇಚ್ಛೆಯನ್ನು ಸೂಚಿಸಿದರು. ಇದಾದ ನಂತರ ಸಿಬಲ್ ಅರ್ಜಿಯನ್ನು ಹಿಂಪಡೆಯಲು ಒಪ್ಪಿಕೊಂಡಿದ್ದು ಅದನ್ನು ಪೀಠವು ಅನುಮತಿಸಿದೆ.

ಜನವರಿ 31ರಂದು ಸೋರೆನ್ ಅವರ ಬಂಧನವನ್ನು ಜಾರ್ಖಂಡ್ ಹೈಕೋರ್ಟ್ ಎತ್ತಿಹಿಡಿದಿದೆ ಎಂದು ಜಾರಿ ನಿರ್ದೇಶನಾಲಯವು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ನಂತರ ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ಮೇ 13ರಂದು ವಿಚಾರಣಾ ನ್ಯಾಯಾಲಯವು ತಿರಸ್ಕರಿಸಿತು.


Share