ಗದಗ: ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ, ಮಾನವೀಯತೆ ಮರೆತು ವಿಡಿಯೋ ಮಾಡಿದ ಜನ!

ಗದಗ: ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕ, ಮಾನವೀಯತೆ ಮರೆತು ವಿಡಿಯೋ ಮಾಡಿದ ಜನ!

Share

ಗದಗ: ಬೈಕ್‌ನಿಂದ ಕೆಳಗೆ ಬಿದ್ದ ಯುವಕನ ಮೈಮೇಲೆ ಟಿಪ್ಪರ್ ಹರಿದು ಕಾಲು ಕಳೆದುಕೊಂಡ ಘಟನೆ ಗದಗ ಜಿಲ್ಲೆ ಮಲ್ಲಸಮುದ್ರ ಗ್ರಾಮದ ಬಳಿ ನಡೆದಿದೆ. ಬೈಕ್ ಸಾವರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಒದ್ದಾಡುತ್ತಿದ್ದರೂ ಜನ ಆತನನ್ನು ಆಸ್ಪತ್ರೆಗೆ ದಾಖಲಿಸದೆ ಮಾನವೀಯತೆ ಮರೆತು ವಿಡಿಯೋ ಮಾಡಿದ್ದಾರೆ.

ಅಪಘಾತದಲ್ಲಿ ಕಾಲು ಕಳೆದುಕೊಂಡ ವಿನಾಯಕ ಹುಡೇದ್(23) ನೋವಿನಿಂದ ರಸ್ತೆಯಲ್ಲೇ ಒದ್ದಾಡುತ್ತಿದ್ದರು. ರಕ್ತ ಸೋರುತ್ತಿದ್ದ ಕಾಲಿಗೆ ತಾವೇ ಕರ್ಚೀಫ್ ಕಟ್ಟಿಕೊಂಡಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ಜನ ಆ ಯುವಕನಿಗೆ ಸಹಾಯ ಮಾಡುವ ಬದಲು, ಆತನ ಕಷ್ಟವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದರು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು.

ಕೊನೆಗೆ 20 ನಿಮಿಷಗಳ ನಂತರ ಮತ್ತೊಬ್ಬ ಯುವಕ ಆತನ ಸಹಾಯಕ್ಕೆ ಬಂದಿದ್ದು, ಕೆಲ ಗ್ರಾಮಸ್ಥರು ಆತನನ್ನು ಖಾಸಗಿ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಹರ್ತಿ ಗ್ರಾಮದ ಹುಡೇದ್ ಮತ್ತು ಮಂಜುನಾಥ ಸಂಶಿ ಅವರು ಮಲ್ಲಸಮುದ್ರ ಬಳಿಯ ಆರ್‌ಟಿಒಗೆ ತೆರಳಿದ ವೇಳೆ ಈ ಅಪಘಾತ ಸಂಭವಿಸಿದೆ. ಹರ್ತಿಗೆ ಹಿಂದಿರುಗುತ್ತಿದ್ದಾಗ ಗದಗ-ಲಕ್ಷ್ಮೇಶ್ವರ ರಸ್ತೆಯಲ್ಲಿ ಬೈಕ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದೆ. ಅವರ ಹಿಂದೆ ಬಂದ ಟಿಪ್ಪರ್ ಹುಡೇದ ಅವರ ಕಾಲಿನ ಮೇಲೆ ಹರಿದಿದೆ.

ಹುಡೇದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.


Share