ಕಾರು ಖರೀದಿಸಿದ ಕೆಲವೇ ಗಂಟೆಗಳಲ್ಲಿ ಭೀಕರ ಅಪಘಾತ ಕೆಲವರ ಸ್ಥಿತಿ ಗಂಭೀರ!

ಕಾರು ಖರೀದಿಸಿದ ಕೆಲವೇ ಗಂಟೆಗಳಲ್ಲಿ ಭೀಕರ ಅಪಘಾತ ಕೆಲವರ ಸ್ಥಿತಿ ಗಂಭೀರ!

Share

ಹೊಸಕಾರು ಖರೀದಿ ಮಾಡಿ ದೇವಸ್ಥಾನಕ್ಕೆ ಹೊರಟ್ಟಿದ್ದ ವೇಳೆ ಕಾರು ಪಲ್ಟಿಯಾಗಿ ಕಾರು ಸಂಪೂರ್ಣ ಜಖಂಗೊಂಡು ಕಾರಿನಲ್ಲಿದ್ದ
8ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಶೆಟಗೇರಿ ಕ್ರಾಸ್ ಸಮೀಪದಲ್ಲಿ ನಡೆದಿದೆ.ತೆಲಂಗಾಣದ ಹೈದರಾಬಾದ್ ಕುಟುಂಬವೊಂದು ನಿನ್ನೆ ಹೈದರಾಬಾದ್ ನಲ್ಲಿ ಕಾರು ಖರೀದಿಸಿ ಕುಟುಂಬ.ಹೊಸ ಕಾರು ಖರೀದಿಸಿದ ಸಂಭ್ರಮದಲ್ಲಿ ಕುಟುಂಬದೊಂದಿಗೆ ಮುರುಡೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದರು.ಈ ವೇಳೆ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡಿದ್ದು ಕಾರಿನ ಚಾಲಕ ಬ್ರೇಕ್ ಹಾಕಲು ಯತ್ನಿಸಿದಾಗ ಬ್ರೇಕ್ ಫೇಲಾಗಿದ್ದರಿಂದ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.


Share