ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನರಾಗಿ ಹೆವೆನ್ ಫೈಟರ್ ಸಂಸ್ಥೆಯ ಅಧ್ಯಕ್ಷರು ಮತ್ತು ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ ಬೀರನೂರು ಆಯ್ಕೆ…

ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನರಾಗಿ ಹೆವೆನ್ ಫೈಟರ್ ಸಂಸ್ಥೆಯ ಅಧ್ಯಕ್ಷರು ಮತ್ತು ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ ಬೀರನೂರು ಆಯ್ಕೆ…

Share

ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಸಿಟೋರಿಯೋ ಕರಾಟೆ ಡು ಯೂನಿಯನ್ ಅಧ್ಯಕ್ಷರು ಮತ್ತು ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಶಿಹಾನ ಸಿ.ಎಸ್ ಅರುಣ್ ಮಾಚಯ್ಯ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಪ್ರಧಾನಿ ಕಾರ್ಯದರ್ಶಿಗಳಾದ ಸೆನಸೈ ಭಾರ್ಗವರೆಡ್ಡಿ ಅವರ ಆದೇಶದ ಮೇರೆಗೆ ಹೆವೆನ್ ಫೈಟರ್ ಸಂಸ್ಥೆಯ ಅಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಕರಾಟೆಪಟು ಮನೋಹರ್ ಕುಮಾರ ಬೀರನೂರ ಅವರನ್ನು ಕರ್ನಾಟಕ ರಾಜ್ಯ ಕರಾಟೆ ಸ್ಪೋರ್ಟ್ಸ್ ಕಮಿಷನ್ ಚೇರ್ಮನರಾನ್ನಾಗಿ ಆಯ್ಕೆ ಮಾಡಿದ್ದಾರೆ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ಪೋರ್ಟ್ ಕಮಿಷನ ಚೇರ್ಮನರನ್ನಾಗಿ ಆಯ್ಕೆಯಾಗಿದ್ದು ಮತ್ತು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯು ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಪ್ರಾತಿನಿದ್ಯ ನೀಡುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಮತ್ತು ಮನೋಹರ್ ಕುಮಾರ್ ಬೀರನೂರ ಅವರ ಸಾಧನೆಗೆ ಕಲ್ಬುರ್ಗಿ ಜಿಲ್ಲೆಯ ಜನತೆ ಮತ್ತು ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಭಿಮಾನಿಗಳು ಮತ್ತು ಹೆವೆನ್ ಫೈಟರ್ಸ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ


Share