ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ ಪ್ರಕರಣದ ಆರೋಪಿ ಅಪ್ರಾಪ್ತನಿಗೆ ನೊಟೀಸ್ ಜಾರಿಗೊಳಿಸಲಾಗಿದ್ದು ಬಾಲ ನ್ಯಾಯ ಮಂಡಳಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ.
ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಕ್ಕಾಗಿ ಸ್ನೇಹಿತರೊಂದಿಗೆ ತೆರಳಿ ಪಬ್ ನಲ್ಲಿ ಸಂಭ್ರಮಾಚರಣೆ ಮಾಡಿ ಪೋರ್ಷೆ ಎಲೆಕ್ಟ್ರಿಕ್ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ಅಪ್ರಾಪ್ತ ಬಾಲಕ ಮಾರ್ಗ ಮಧ್ಯೆ 200 ಕಿ.ಮೀ ವೇಗದಲ್ಲಿ ಬಂದು ದ್ವಿಚಕ್ರ ವಾಹನ ಸವಾರರರಿಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದರು.ಬಾಲ ನ್ಯಾಯಮಂಡಳಿ ನೀಡಿರುವ ಜಾಮೀನನ್ನು ಮರುಪರಿಶೀಲಿಸಬೇಕೆಂದು ಅರ್ಜಿ ಸಲ್ಲಿಸಿದ ಬಳಿಕ ಪೊಲೀಸರು ನೊಟೀಸ್ ಜಾರಿಗೊಳಿಸಿದ್ದಾರೆ. ಮಂಡಳಿಯು ಇಲ್ಲಿನ ಯರವಾಡ ಪ್ರದೇಶದಲ್ಲಿರುವ ತನ್ನ ಕಚೇರಿಯಲ್ಲಿ ಮಧ್ಯಾಹ್ನ ಪರಿಷ್ಕರಣೆ ಅರ್ಜಿಯನ್ನು ಆಲಿಸುವ ನಿರೀಕ್ಷೆಯಿದೆ.
ಮಹಾರಾಷ್ಟ್ರದ ಪುಣೆ ನಗರದ ಕಲ್ಯಾಣಿ ನಗರದಲ್ಲಿ ಈ ಅಪಘಾತವಾದಾಗ ಕಾರು ಚಾಲನೆ ಮಾಡುತ್ತಿದ್ದ 17 ವರ್ಷದ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪೋರ್ಷೆ ಕಾರು ಇಬ್ಬರು ಮೋಟರ್‌ಬೈಕ್‌ನಲ್ಲಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಮಾರಣಾಂತಿಕವಾಗಿ ಡಿಕ್ಕಿ ಹೊಡೆದಿದೆ.
ರಿಯಲ್ ಎಸ್ಟೇಟ್ ಡೆವಲಪರ್‌ನ ಮಗನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿತ್ತು. ಅದು ಗಂಟೆಗಳ ನಂತರ ಅವನಿಗೆ 7,500 ರೂಪಾಯಿಗಳ ಬಾಂಡ್ ನೀಡುವಂತೆ ಸೂಚಿಸಿ ಜಾಮೀನು ನೀಡಿತು.