2568ನೇ ವೈಶಾಖ ಬುದ್ಧ ಪೂರ್ಣಿಮ ಮತ್ತು ಬುದ್ಧ ಜಯಂತಿ

2568ನೇ ವೈಶಾಖ ಬುದ್ಧ ಪೂರ್ಣಿಮ ಮತ್ತು ಬುದ್ಧ ಜಯಂತಿ

Share

ಬುದ್ಧ ಪೂರ್ಣಿಮಾ ಮತ್ತು ಬುದ್ಧ ಜಯಂತಿಯ ಇದ್ದು ಈ ಒಂದು ದಿನ ಪಟ್ಟಣದ ಎಲ್ಲಾ ಮಾಂಸದ ವ್ಯಾಪಾರ ಮತ್ತು ಹೋಟೆಲ್ ಅಂಗಡಿಗಳನ್ನು ಒಂದು ದಿನದ ಮಟ್ಟಿಗೆ ಬಂದು ಮಾಡುವ ಕುರಿತು.

ಈ ಮೇಲೆ ಹೇಳಿರುವ ವಿಷಯದ ಅನ್ವಯ ದಮ್ಮ ದೀಪ ಸಂಚಾಲನಾ ಸಮೀತಿ (ರಿ) ಸಿರವಾರ ತಾಲೂಕ. ಘಟಕದ ವತಿಯಿಂದ ತಮಗೆ ತಿಳಿಸುವುದೇನೆಂದರೆ,

ದಿನಾಂಕ: 23/05/2024ರ 2568ನೇ ವೈಶಾಖ ಬುದ್ದ ಪೂರ್ಣಿಮ ಮತ್ತು ಬುದ್ಧ ಜಯಂತಿ ಆಚರಣೆ ಇದ್ದು ಆ ಒಂದು ದಿನವನ್ನು ವಿಶ್ವದಾದ್ಯಂತ ಎಲ್ಲಾ ಬುದ್ಧನ ಅನುಯಾಯಿಗಳು ಮತ್ತು ಶಾಂತಿ ಪ್ರಿಯ ಬುದ್ಧನನ್ನ ಆರಾಧಿಸುತ್ತಿದ್ದು ಬುದ್ಧರ ವಿಶ್ವ ಸಂದೇಶದಂತೆ ಶಾಂತಿ ನೆಲೆಸುವ ಕಾರಣ ಪಟ್ಟಣದಲ್ಲಿ ಯಾವುದೇ ಅಂಗಡಿಗಳಲ್ಲಿ ಪ್ರಾಣಿ ಹಿಂಸೆ ಮಾಡದಂತೆ ತಾವುಗಳು ಪಟ್ಟಣದ ಎಲ್ಲಾ ಮೇಕೆ, ಕುರಿ, ಕೋಳಿ, ಹಂದಿ, ಮೀನಿನ ಮಾಂಸ ಮಾರಾಟ ಮಾಡುವ ಮತ್ತು ಹೋಟೆಲ್ ಅಂಗಡಿಗಳನ್ನು ಬಂದ್ ಮಾಡುವಂತೆ ನಿಷೇದಾಜ್ಞೆ ಜಾರಿ ಕೂಡಲೇ ಹೊರಡಿಸುವಂತೆ ತಮ್ಮಲ್ಲಿ ಈ ಮೂಲಕ ವಿನಂತಿಸಿ ಕೊಳ್ಳುತ್ತಾ ಎಲ್ಲಾ ಅಂಗಡಿಗಳಿಗೆ ನೋಟಿಸ್‌ ಅಥವಾ ಡಂಗೂರಾ ಹೊರಡಿಸಿ ಎಂದು ಆಗ್ರಹಿಸುತ್ತೇವೆ. ವಿಷಯದ ಅನ್ವಯ ದಮ್ಮ ದೀಪ ಸಂಚಾಲನಾ ಸಮೀತಿ (ರಿ) ಸಿರವಾರ ತಾಲೂಕ. ಘಟಕದ ವತಿಯಿಂದ. ಸಿರವಾರ್ ತಸೀಲ್ದಾರ್ ಆಡಳಿತ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ, ಡಿ ಎಸ್ ಎಸ್ ದಲಿತ ಮುಖಂಡರು ಅರಳಪ್ಪ, ಡಿ ಎಸ್ ಎಸ್ ದಲಿತ ಮುಖಂಡರು ಬಸವರಾಜ. ಭಂಡಾರಿ, ಹುಲಿಗೆಪ್ಪ. ಜಯಪ್ಪ,ಎಚ್ ಡಿ ಭೀಮಣ್ಣ ಶಾಂತಕುಮಾರ ಪಿತಗಲ್ ಬಸವರಾಜ್ ಡೊಂಗ್ರಿ.ಪಾರ್ಥ,ನಾಗರಾಜ್,ಭೀಮರಾಯ ಪ್ರಕಾಶ್ ,ಹುಸೇನಿ ಶಂಕರ ಯಲ್ಲಪ್ಪ ರಾಮು ಯಾಕೋಬ ಚನ್ನಬಸವ. ಇನ್ನು ಮುಂತಾದವರು ಉಪಸ್ಥಿತರಿದ್ದರು.


Share