ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದರ್ಶನ್ ದಂಪತಿ: ‘ಕರ್ಮ’ ಎಂದು ಪೋಸ್ಟ್ ಮಾಡಿದ ಪವಿತ್ರಾ ಗೌಡ

ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದರ್ಶನ್ ದಂಪತಿ: ‘ಕರ್ಮ’ ಎಂದು ಪೋಸ್ಟ್ ಮಾಡಿದ ಪವಿತ್ರಾ ಗೌಡ

Share

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಕಳೆದ ಮೇ 19ರಂದು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಈ ಬಗ್ಗೆ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ ಪವಿತ್ರಾ ಗೌಡ ಎಂಬುವರು ಮಾತ್ರ ಕರ್ಮ ಎಂದು ಕಮೆಂಟ್ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು 2003ರ ಮೇ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಮೇ 19ಕ್ಕೆ 21 ವರ್ಷವಾಗಿದ್ದು ದುಬೈಗೆ ತೆರಳಿ ಇಬ್ಬರು ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಮಧ್ಯೆ ನಟಿ ಪವಿತ್ರಾ ಗೌಡ ಅವರು ನಿಗೂಡಾರ್ಥದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

ದರ್ಶನ್ ವಿಚಾರವಾಗಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆದಿತ್ತು. ದರ್ಶನ್ ಜೊತೆಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದ ಪವಿತ್ರಾ ಗೌಡ ‘ಒಂದು ದಶಕ ಕಳೆಯಿತು. ನಮ್ಮ ಸಂಬಂಧಕ್ಕೆ 10 ವರ್ಷ ಎಂದು ಬರೆದುಕೊಂಡಿದ್ದರು. ಇದು ವಿಜಯಲಕ್ಷ್ಮೀ ಕೆರಳುವಂತೆ ಮಾಡಿತ್ತು. ಅಲ್ಲದೆ ಇದಕ್ಕೆ ಬಹಿರಂಗವಾಗಿಯೇ ತಿರುಗೇಟು ಕೊಟ್ಟಿದ್ದರು.ಇನ್ನು ಈ ಹಿಂದೆ ಸಂದರ್ಶನವೊಂದರಲ್ಲಿ ನಟ ದರ್ಶನ್, ಕರ್ಮ ಅನ್ನೋದು ಹೊರೆ ಇದ್ದಂತೆ. ಸಣ್ಣವರಿದ್ದಾಗ ಹಿರಿಯರು ಹೇಳ್ತಿದ್ರು, ಹೀಗೆಲ್ಲ ಮಾಡ್ತಿದ್ದೀಯಾ ಅದು ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತದೆ ಅಂತ. ಈಗ ಹಾಗಿಲ್ಲ, ಅಲ್ಲೇ ಡ್ರಾ, ಅಲ್ಲೇ ಬಹುಮಾನ ಎಂದು ಹೇಳಿದ್ದರು. ಈ ವಿಡಿಯೋನ ಸ್ಟೇಟಸ್​ನಲ್ಲಿ ಹಾಕಿಕೊಂಡಿರುವ ಪವಿತ್ರಾ ಗೌಡ ಕರ್ಮ ಎಂದು ಪೋಸ್ಟ್ ಮಾಡಿದ್ದಾರೆ.


Share