ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದ ನಾಗಣ್ಣ ಕಣ್ಣಿ ಎನ್ನುವವರ ನ್ಯಾಯ ಬೆಲೆ ಅಂಗಡಿಯಲ್ಲಿ ಗ್ರಾಹಕರಿಂದ ಅನಧಿಕೃತವಾಗಿ ಪ್ರತಿ ರೇಷನ್ ಕಾರ್ಡ್ ಸ್ಥಂಬು ಮಾಡಿಕೊಳ್ಳಲು ಪ್ರತಿ ಕಾರ್ಡಿಗೆ ರೂ.10 ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರಪಿಸಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕ ಸೇನೆ ಕಟ್ಟಡ ಕಾರ್ಮಿಕ ಘಟಕದ ಅಧ್ಯಕ್ಷರಾದ ಚಂದ್ರು ಕುಳುಕೂರ್ ಅವರು ಕಲ್ಬುರ್ಗಿ ಜಿಲ್ಲೆಯ ಆಹಾರ ನಿಗಮದ ಇಲಾಖೆಗೆ ಮತ್ತು ಇದಕ್ಕೆ ಸಂಬಂಧಪಟ್ಟ ಬೆಂಗಳೂರು ನಗರದ ಆಹಾರ ನಿಗಮದ ಇಲಾಖೆಗೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ಹಳ್ಳಿಯಲ್ಲು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಮನವಿ ಪತ್ರ ಕೊಡುವದಾಗಿ ತಿಳಿಸಿದ್ದಾರೆ ಒಂದು ವೇಳೆ ನಿರ್ಲಕ್ಷ ವಹಿಸಿದರೆ ರಾಜ್ಯಮಟ್ಟದ ಆಹಾರ ಇಲಾಖೆಯ ನಿಗಮದ ಎದುರು ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿ ಪತ್ರಿಕಾ ಪ್ರಕಟಣೆಯಲ್ಲಿ ನಮ್ಮ ಕರ್ನಾಟಕ ಸೇನೆ (ಬಸವರಾಜ್ ಪಡಕೋಟಿ ಬಣ,,) ರಾಜ್ಯಾಧ್ಯಕ್ಷ ನೇತ್ರತ್ವದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸುವದಾಗಿ ನಗರ ಘಟಕದ ಕಾರ್ಯಾಧ್ಯಕ್ಷರಾದ ಚಂದ್ರು ಕೊಳಕೂರ್ ಅವರುಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ