ಭಾರತೀಯ ಜನತಾ ಪಾರ್ಟಿ ಕಾರವಾರ ಗ್ರಾಮೀಣ ಮಂಡಲವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸದಾಶಿವಗಡದ ಪುರುಷೋತ್ತಮ್ ಹಾಲ್ ನಲ್ಲಿ ಯೋಗ ಮಾಡುವ ಮುಖಾಂತರ ಆಚರಿಸಲಾಯಿತು.

ಭಾರತೀಯ ಜನತಾ ಪಾರ್ಟಿ ಕಾರವಾರ ಗ್ರಾಮೀಣ ಮಂಡಲವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸದಾಶಿವಗಡದ ಪುರುಷೋತ್ತಮ್ ಹಾಲ್ ನಲ್ಲಿ ಯೋಗ ಮಾಡುವ ಮುಖಾಂತರ ಆಚರಿಸಲಾಯಿತು.

Share

ಈ ಸಮಯದಲ್ಲಿ ಗ್ರಾಮೀಣ ಅಧ್ಯಕ್ಷರಾದ ಸುಭಾಷ್ ಗುನಗಿ ಅವರು ಮಾತನಾಡಿ ಪತಂಜಲಿ ಮಹರ್ಷಿ ಗಳು
ಯೋಗದ ಮಹತ್ವವನ್ನು ಕ್ರಿ.ಶ. 5ನೇಶತಮಾನದಲ್ಲಿ ತಿಳಿಸಿಕೊಟ್ಟರು.ಮನುಷ್ಯನಿಗೆಸ್ವಾಭಾವಿಕವಾಗಿ ಆರೋಗ್ಯವನ್ನಕಾಪಾಡಿಕೊಳ್ಳಲು ಇರುವಂತ ದೊಡ್ಡ ಔಷಧಿ,ಯೋಗವಾಗಿದೆ.ಹಿಂದಿನ ಕಾಲದಲ್ಲಿ ಯೋಗ ಮತ್ತು ಧ್ಯಾನವನ್ನು ಮಾಡಿಕೊಂಡು ಆಸ್ಪತ್ರೆಗೆ ಹೋಗದೆ
ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದರು ಇಂದಿನ ಕಾಲದಲ್ಲಿ ಆಸ್ಪತ್ರೆಗೆ ಹೋಗದೇ
ಇರುವವರು ಯಾರು ಇಲ್ಲ ಆದ್ದರಿಂದಯೋಗವನ್ನು ಕೇವಲ ಒಂದು ದಿನಕ್ಕೆಮಾತ್ರ ಸೀಮಿತಗೊಳಿಸದೇ, ಪ್ರತಿನಿತ್ಯ
ಮಾಡುವುದರ ಮೂಲಕ ಆರೋಗ್ಯದಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾತನಾಡಿದರು.ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸೂರಜ್ ದೇಸಾಯಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಜಾತಾ ಬಾಂದೇಕರ್, ಗ್ರಾಮೀಣ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.


Share