ಆರೋಗ್ಯಕರ ಮಗು ಬೇಕೆ? ಸಂಸ್ಕರಿತ ಆಹಾರ ಸೇವನೆ ತ್ಯಜಿಸಿ…!

ಆರೋಗ್ಯಕರ ಮಗು ಬೇಕೆ? ಸಂಸ್ಕರಿತ ಆಹಾರ ಸೇವನೆ ತ್ಯಜಿಸಿ…!

Share

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲದು. ಕೆಲವು ಆಹಾರಗಳು ಗರ್ಭಿಣಿಯರ ಆರೋಗ್ಯವನ್ನು ಹದಗೆಡಿಸುತ್ತದೆ. ಅವುಗಳಲ್ಲಿ ಅತಿಯಾಗಿ ಸಂಸ್ಕರಿಸಿದ ಆಹಾರ ಹಾಗೂ ಫಾಸ್ಟ್​ ಫುಡ್ ಕೂಡ ಸೇರಿದೆ. ಈ ಆಹಾರಗಳನ್ನು ಸೇವಿಸಿದರೆ ಗರ್ಭಿಣಿಯರ ಆರೋಗ್ಯದಲ್ಲಿ ಏನು ಬದಲಾವಣೆಯಾಗುತ್ತದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಗರ್ಭಿಣಿಯರು ತಮ್ಮ ಆಹಾರದ ಆಯ್ಕೆಗಳ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. ಅದರಲ್ಲೂ ಸಂಸ್ಕರಿಸಿದ ಆಹಾರದಿಂದ ದೂರ ಉಳಿಯುವುದು ಉತ್ತಮ. ಏಕೆಂದರೆ, ಇವುಗಳಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪು ಅಧಿಕವಾಗಿರುತ್ತದೆ. ಅವುಗಳ ಸೇವನೆಯು ಭ್ರೂಣದ ಬೆಳವಣಿಗೆ ಹಾನಿಯುಂಟು ಮಾಡುತ್ತವೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ICMR-NIN) ಹೇಳಿದೆ.

ಗರ್ಭಿಣಿ ಮಹಿಳೆಯರು ಸಂಸ್ಕರಿಸಿದ ಆಹಾರದ ಬದಲಿಗೆ ಪೌಷ್ಟಿಕಾಂಶದ ಅಗತ್ಯತೆಗಳು ಮತ್ತು ಮಗುವಿನ ಬೆಳವಣಿಗೆಗಳ ಅಗತ್ಯಗಳನ್ನು ಪೂರೈಸಲು ವಿವಿಧ ರೀತಿಯ ಆಹಾರವನ್ನು ಸೇವಿಸಬೇಕು.

ಗರ್ಭಿಣಿಯರು ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ ಅಥವಾ ಕೊಬ್ಬು, ಸಕ್ಕರೆ ಮತ್ತು ಉಪ್ಪು ಅಧಿಕವಾಗಿರುವ ಆಹಾರಗಳನ್ನು ಸೇವನೆ ಮಾಡಿದರೆ, ಅದು ಭ್ರೂಣದ ಬೆಳವಣಿಗೆಗೆ ಹಾನಿಯುಂಟು ಮಾಡುತ್ತದೆ ಎಂದು ವರದಿ ಹೇಳಿದೆ.
ಅಪೌಷ್ಟಿಕತೆಯಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಚಿಕ್ಕದಾದ ಅಥವಾ ಕಡಿಮೆ ಜನನ ತೂಕವನ್ನು ಹೊಂದಿರುವ ಅಥವಾ ಪ್ರಸವಪೂರ್ವ ಶಿಶುಗಳಿಗೆ ಜನ್ಮ ನೀಡುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಂಸ್ಕರಿಸಿದ ಆಹಾರದಿಂದ ದೂರ ಉಳಿಯುವುದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನವನ್ನು ಕೂಡ ತ್ಯಜಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಕೇವಲ ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗಷ್ಟೇ ಅಲ್ಲದೆ, ಗರ್ಭಿಣಿಯಾಗಲು ಬಯಸುತ್ತಿರುವ ಮಹಿಳೆಯರಿಗೂ ಆಹಾರದ ಪಟ್ಟಿಯನ್ನು ನೀಡಿದೆ.

ಹಸಿರು ಎಲೆಗಳ ತರಕಾರಿಗಳು, ತಾಜಾ ಹಣ್ಣುಗಳು ಮತ್ತು ಮಾಂಸಾಹಾರ ಸೇರಿದಂತೆ ವಿವಿಧ ಕಾಳುಗಳು ಮತ್ತು ಕಾಲೋಚಿತ ತರಕಾರಿಗಳನ್ನು ಸೇವಿಸುವ ಮೂಲಕ ಖನಿಜ ಮತ್ತು ವಿಟಮಿನ್ ಅವಶ್ಯಕತೆಗಳನ್ನು ಪೂರೈಸಬಹುದು. ಹಾಲು ಜೈವಿಕವಾಗಿ ಲಭ್ಯವಿರುವ ಅತ್ಯುತ್ತಮ ಮೂಲವಾಗಿದ್ದು, ಇದಲ್ಲಿ ಕ್ಯಾಲ್ಶಿಯಂ ಹೇರಳವಾಗಿದೆ ಎಂದು ಹೇಳಿದೆ.

ಗರ್ಭಿಣಿಯರು ಸಾಕಷ್ಟು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಇದು ವಿಟಮಿನ್ ಡಿ ಅವಶ್ಯಕತೆಗಳನ್ನು ಪೂರೈಸಲು ಅವಶ್ಯಕವಾಗಿದೆ ಎಂದೂ ತಿಳಿಸಿದೆ.ಚೆನ್ನೈನ ಮದರ್‌ಹುಡ್ ಆಸ್ಪತ್ರೆಯ ಸಲಹೆಗಾರ, ಆಹಾರ ಪದ್ಧತಿ ಮತ್ತು ಪೌಷ್ಟಿಕತಜ್ಞ ಆರ್. ಧನಲಕ್ಷ್ಮಿ ಅವರು ಮಾತನಾಡಿ, ICMR-NIN ಪರಿಷ್ಕೃತ ಆಹಾರ ಮಾರ್ಗಸೂಚಿಗಳು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ತಮ್ಮ ಆಹಾರಕ್ರಮವನ್ನು ಯೋಜಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯರು ಧಾನ್ಯಗಳು, ಕಾಳುಗಳು, ತರಕಾರಿಗಳು, ಹಣ್ಣುಗಳು, ಮಾಂಸ, ಡೈರಿ ಮತ್ತು ಮೀನುಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಇದು ಅವರ ಗರ್ಭಿಣಿ ಮಹಿಳೆ ಮತ್ತು ಭ್ರೂಣದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.

ಪ್ಲಾಸ್ಟಿಕ್‌ಗಳೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ರಾಸಾಯನಿಕಗಳ ವರ್ಗವಾದ ಥಾಲೇಟ್‌ಗಳಿಗೆ ಒಡ್ಡಿಕೊಳ್ಳುವುದರ ಬಗ್ಗೆ ಗರ್ಭಿಣಿಯರು ಹೆಚ್ಚು ಎಚ್ಚರ ವಹಿಸಬೇಕು.

ಎನ್​ವಿರಾನ್ಮೆಂಟಲ್ ಇಂಟರ್‌ನ್ಯಾಷನಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಗರ್ಭಾವಸ್ಥೆಯಲ್ಲಿ ಒಮ್ಮೆ ಸೇವಿಸಿದ ಥಾಲೇಟ್‌ಗಳು ರಕ್ತಕ್ಕೆ ಪ್ರವೇಶಿಸಬಹುದು. ಇದು ಭ್ರೂಣದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ. ಗರ್ಭಾವಸ್ಥೆಯಲ್ಲಿ ಈ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಿಕೆಯು ಕಡಿಮೆ ಜನನದ ತೂಕ, ಅವಧಿಪೂರ್ವ ಜನನ ಮತ್ತು ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.


Share