ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್‍ಗೆ ಮಾದರಿ

ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್‍ಗೆ ಮಾದರಿ

Share

ಕಲಬುರಗಿ: -ಹನ್ನೆರಡನೇ ಶತಮಾನದ ಅನುಭವ ಮಂಟಪ ಇಂದಿನ ಪಾರ್ಲಿಮೆಂಟ್‍ಗೆ ಮಾದರಿಯಾಗಿದೆ ಎಂದು ಹಿರಿಯ ಮಕ್ಕಳ ಕವಿ ಎ.ಕೆ.ರಾಮೇಶ್ವರ ಹೇಳಿದರು.
ಕಮಲಾಪುರ ತಾಲ್ಲೂಕಿನ ಕುರಿಕೋಟಾದ ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ಆಯೋಜಿಸಿದ್ದ ಅನುಭಾವ ಸಂಗಮ ಆಧ್ಯಾತ್ಮಿಕ ಚಿಂತನ ಉಪನ್ಯಾಸ ಸರಣಿಯ 8ನೇ ಮಾಲಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೇರಡನೇ ಶತಮಾನದ ಶಿವಶರಣರ ಕಾಯಕ ದಾಸೋಹ, ಸಮಾನತೆಯ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಡಾ.ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಮಾತನಾಡಿ, ಅನುಭಾವ ಸಂಗಮ ಶೀರ್ಷಿಕೆ ಅಡಿಯಲ್ಲಿ ಆಧ್ಯಾತ್ಮಿಕ ಜ್ಞಾನ ಚಿಂತನೆಯನ್ನು ಪ್ರತಿ ತಿಂಗಳು ಆಯೋಜಿಸುತ್ತಿರುವ ಮಠದ ಪೂಜ್ಯರು ಹಾಗೂ ಗ್ರಾಮದ ಜನತೆಗೆ ಅಭಿನಂದನೆ ಸಲ್ಲಿಸಿದರು. ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಉತ್ತಮ ಸಂಸ್ಕøತಿ, ಸಂಸ್ಕಾರ, ಸಂಪ್ರದಾಯಗಳನ್ನು ಬೆಳೆಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಶರಣ ಜೀವಿ, ಕವಿ, ಸಾಹಿತಿ ನಾಗಣ್ಣ ಬಡಿಗೇರ, ಶಿಕ್ಷಕ ಅಂಬಾರಾಯ ಮಡ್ಡೆ, ಅಜರ ಪಟೇಲ್ ಉಪಸ್ಥಿತರಿದ್ದರು. ‌


Share