‘ಯೋಗ’ ದಿನಾಚರಣೆಗಷ್ಠೇ ಸೀಮಿತವಾಗದಿರಲಿ: ಸಂತೋಷ ಕುಡ್ಡಳ್ಳಿ

‘ಯೋಗ’ ದಿನಾಚರಣೆಗಷ್ಠೇ ಸೀಮಿತವಾಗದಿರಲಿ: ಸಂತೋಷ ಕುಡ್ಡಳ್ಳಿ

Share

ಕಾಳಗಿ:ಮಾನವನ ಸರ್ವರೋಗಗಳಿಗೆ ಯೋಗ ಮನೆ ಮದ್ದಾಗಿದೆ.
ಆದರೆ ಈ ಯೋಗಾಭ್ಯಾಸವು ಬರಿ ದಿನಾಚರಣೆಗಷ್ಠೇ ಸೀಮಿತವಾಗಬಾರದು ಎಂದು ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಪತಂಜಲಿ ಭಾರತ್ ಸ್ವಾಭಿಮಾನ ಸಮಿತಿಯ ತಾಲೂಕ ಪ್ರಭಾರಿಗಳೂ ಆಗಿರುವ ಸಂತೋಷ ಕುಡ್ಡಳ್ಳಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಪಟ್ಟಣದ ಜಗದ್ಗುರು ಶ್ರೀರೇವಣಸಿದ್ಧೇಶ್ವರ, ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.ನೂರಾರು ರೋಗಗಳನ್ನು ದೂರವಿಟ್ಟು ಉತ್ತಮ ಆರೋಗ್ಯ, ಏಕಾಗ್ರತೆಯ ಮನಸ್ಸು, ಶಾಂತಿ ಮತ್ತು ಸಮಚಿತ್ತದ ಬದುಕನ್ನು ಸಾಗಿಸಬೇಕಾದರೆ ಯೋಗಾಭ್ಯಾಸವು ತುಂಬಾ ಅಗತ್ಯವಾಗಿದೆ. ದೈನಂದಿನ ಜೀವನದಲ್ಲಿ ಯೋಗಕ್ಕೆ ಸ್ವಲ್ಪ ಸಮಯ ನೀಡಿದರೆ, ರೋಗವನ್ನು ದೂರ ಮಾಡಿ ಬದುಕಿನ ಬಂಡಿಯನ್ನು ದೀರ್ಘಕಾಲದತ್ತ ಕೊಂಡೊಯ್ಯುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲರಾದ
ಡಾ. ಪಂಡಿತ ಸಿ. ಬಿಳಾಮಗೆ ಮಾತನಾಡಿ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮನುಷ್ಯ ಸಮಯವಿಲ್ಲದೆ ಒತ್ತಡದ ಬದುಕಿನಲ್ಲಿ ಕಾಲ ಕಳೆಯುತ್ತಿದ್ದಾನೆ.
ಶಾಂತಿ-ಸಂಯಮ ಕಳೆದುಕೊಳ್ಳುತ್ತಿದ್ದಾನೆ.ಇವೆಲ್ಲವೂಗಳ ಶಮನಕ್ಕಾಗಿ ಯೋಗ ದಾರಿದೀಪವಾಗಿದೆ.ಜನತೆಯಲ್ಲಿ ಯೋಗದ ಅರಿವನ್ನು ಮೂಡಿಸುವಲ್ಲಿ ಪತಂಜಲಿ ಯೋಗ ಶಿಬಿರ ಹಾಗೂ ಕಸಾಪ ಮಾಡುತ್ತಿರುವ ಕೆಲಸ ತುಂಬಾ ಶ್ಲಾಘನೀಯ ಎಂದರು.ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ,ಜಯಲಕ್ಷ್ಮೀ ಹಾವಪ್ಪಗೋಳ
ಪ್ರೊ. ಚಿತ್ರಶೇಖರ ನಾಗೂರ
ಡಾ. ಗುರುಪ್ರಕಾಶ ಹೂಗಾರ
ಡಾ.ಶ್ರೀನಿವಾಸ ನಾಯನೂರ
ಡಾ. ಶಿವಶರಣಪ್ಪ ಮೋತಕಪಳ್ಳಿ
ಡಾ. ಶಿವಲೀಲಾ ಚಟ್ನಳ್ಳಿ
ಪ್ರೊ. ಸುಜಾತಾ ಮಾಕಲ್
ಪ್ರೊ. ಜ್ಯೋತಿ ಕುಲಕರ್ಣಿ
ಪ್ರೊ. ರಾಜೇಂದ್ರ ಕುಲಕರ್ಣಿ
ಗೋಪಾಲ ಚನ್ನೂರ
ರೇವಣಸಿದ್ಧಪ್ಪ ಗುಂಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Share