ಜೇವರ್ಗಿ ತಾಲೂಕಿನ ಡಾ ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲೂಕ ಅಧ್ಯಕ್ಷರಾದ ಬಸವರಾಜ ಬಿ ಬಾಗೇವಾಡಿ ಅವರು 2009 ರಿಂದ ಸಮಾಜ ಸೇವೆಯಲ್ಲಿ ಎಲೆ ಮರಿಯ ಕಾಯಿಯಂತೆ ಸಮಾಜಮುಖಿಯಾಗಿ ಸಂಘಟನಾತ್ಮಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಬಸವರಾಜ್ ಅವರ ತಂದೆ ಹೆಸರು ಬುಸಪ್ಪ ಬಾಗೇವಾಡಿ ತಾಯಿಯ ಹೆಸರು ನಿಂಗಮ್ಮ ಕಲ್ಲಹಂಗರಗಾ. ಗ್ರಾಮದವರಾದ ಬಸವರಾಜ್ ಬಿ ಬಾಗೇವಾಡಿ ಅವರು ಚಿಕ್ಕ ವಯಸ್ಸಿನಿಂದಲೇ ಡಾ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿ ಮದುವೆಯಾದ ಮೊದಲ ಮಗುವಿಗೆ ಡಾ. ವಿಷ್ಣುವರ್ಧನ್ ಅವರ ನಾಮಕರಣ ಮಾಡಿ ಅಭಿಮಾನ ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಪ್ರತಿವರ್ಷ ಡಾ ವಿಷ್ಣುವರ್ಧನ್ ಅವರ ಜನ್ಮದಿನಾಚರಣೆ ಮಾಡುತ್ತಿದ್ದಾರೆ ಅದೇ ರೀತಿಯಾಗಿ ಡಾಕ್ಟರ್ ವಿಷ್ಣುವರ್ಧನ್ ಅಂತ್ಯ ಸಂಸ್ಕಾರದ ಸ್ಥಳದಲ್ಲಿ ವಿಷ್ಣು ಸ್ಮಾರಕ ಆಗಬೇಕು ಅಂತ ಕರ್ನಾಟಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ ಅಷ್ಟೇ ಅಲ್ಲದೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ಗೌರವ ಸನ್ಮಾನ ಮಾಡಿದ್ದಾರೆ ಮತ್ತು ಮಹಾದಾಯಿ ನೀರಿನ ನದಿ ಹಂಚಿಕೆ ಸಲುವಾಗಿ ಪ್ರಧಾನಿಗೆ ಮಧ್ಯಸ್ಥಿಕೆ ವಹಿಸಲು ಮನವಿ ಸಲ್ಲಿಸಿದ್ದಾರೆ ನೂತನವಾಗಿ ಇಜೇರಿ ಗ್ರಾಮದಲ್ಲಿ ಯಡ್ರಾಮಿ ಮತ್ತು ಜೇವರ್ಗಿ ತಾಲೂಕಿನಲ್ಲಿ ಡಾ ವಿಷ್ಣುವರ್ಧನ್ ವೃತ್ತವನ್ನು ನಿರ್ಮಾಣ ಮಾಡಿದ್ದಾರೆ ಅದೇ ರೀತಿಯಾಗಿ ಡಾ ವಿಷ್ಣುವರ್ಧನ್ ಅವರ ಒಂಬತ್ತನೇ ಪುಣ್ಯಸ್ಮರಣೆಯ ನಿಮಿತ್ಯವಾಗಿ ಜೇವರ್ಗಿ ಪಟ್ಟಣದಲ್ಲಿ 2019ರ ಯಜಮಾನ್ರು ಕ್ಯಾಲೆಂಡರ್ ಬಿಡುಗಡೆ ಹಾಗೂ ತಾಲೂಕಿನ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ದುರಸ್ತಿಗಾಗಿ ಆಗ್ರಹಿಸಿ ಮನವಿ ಅದೇ ರೀತಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಉದ್ಯೋಗ ನೀಡುವಂತೆ ಒತ್ತಾಯಿಸಿ ಮನವಿ ಮಾಡಿದ್ದಾರೆ ಅದೇ ರೀತಿಯಾಗಿ ತಾಲೂಕಿನಲ್ಲಿ ಆಧಾರ್ ಕಾರ್ಡ್ ನೊಂದಣಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡುವಂತೆ ತಾಲೂಕ ದಂಡಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಹಾಗೂ ಸೆಪ್ಟೆಂಬರ್ 18 ಮತ್ತು 2019 ರಂದು ಡಾ.ವಿಷ್ಣುವರ್ಧನ ರಾಷ್ಟ್ರೀಯ ಆದರ್ಶ ದಿನಾಚರಣೆ ಮಾಡಲಾಯಿತು ಅದೇ ರೀತಿಯಾಗಿ ತಾಲೂಕಿನಲ್ಲಿ ಜೂನಿಯರ್ ವಿಷ್ಣುವರ್ಧನ್ ಅವರಿಗೆ ಆದರದ ಸನ್ಮಾನ ಹಾಗೂ ದೇಶ ಸಂಚಾರ ಕೈಗೊಂಡಿರುವ ಹರಿಯಾಣದ ಬಗಿಚ ಸಿಂಗ ಅವರಿಗೆ ಸಮಿತಿಯಿಂದ ಸನ್ಮಾನ ಅದೇ ರೀತಿಯಾಗಿ ಅದೇ ರೀತಿ ಸರ್ಕಾರಿ ಶಾಲೆಯ ಸ್ವಕ್ಷತೆಗೆ ಹಾಗೂ ದುರಸ್ತಿಗೆ ಅಗ್ರಹಿಸಿ ಸಮಿತಿಯಿಂದ ಅಧಿಕಾರಿಗಳಿಗೆ ಮನವಿ ಅದೇ ರೀತಿಯಾಗಿ ಡಾ ವಿಷ್ಣುವರ್ಧನ ಅವರ ಜೀವನಾಧಾರಿತ ಕಿರು ಪುಸ್ತಕ ತಾಲೂಕಿನ ಶಾಲೆಯ ಮಕ್ಕಳಿಗೆ ಸಮಿತಿಯಿಂದ ವಿತರಣೆ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯದ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಅದೇ ರೀತಿಯಾಗಿ ತಾಲೂಕಿನಲ್ಲಿ ಡಾ ವಿಷ್ಣು ಸೇನಾ ಸಮಿತಿ ವತಿಯಿಂದ ಕೆಲವು ಭ್ರಷ್ಟ ಅಧಿಕಾರಿಗಳಿಗೆ ನೀರು ಕುಡಿಸಿದ ಉದಾಹರಣೆ ಸಾಕಷ್ಟು ಇವೆ ಹಾಗೂ ತಾಲುಕಿನ ಪ್ರಗತಿಪರ ಚಿಂತಕರಾದ ಡಾ. ವಿಷ್ಣು ಸೇನಾ ಸಮಿತಿಯ ತಾಲೂಕ ಅಧ್ಯಕ್ಷರಾದ ಬಸವರಾಜ ಬಿ ಬಾಗೇವಾಡಿ ಯವರ ಬಗ್ಗೇ ತಾಲೂಕಿನ ಅಭಿಮಾನಿ ವರ್ಗದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ, ಹಾಗೂ ಬಸವರಾಜ್ ಬಿ ಬಾಗೇವಾಡಿ ಅವರು ಇನ್ನೂ ಹೆಚ್ಚಿನ ಸೇವೆ ಮಾಡಲು ರಾಜಕೀಯದಲ್ಲಿ ತೊಡಗಿಸಿಕೊಂಡು ಸಮಾಜಸೇವೆ ಮಾಡಬೇಕೆಂದು ಕನಸಿನ ಭಾರತ ದಿನ ಪತ್ರಿಕೆ ಶುಭ ಹಾರೈಸುತ್ತದೆ….