ಯಳಂದೂರು ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹಿರಿಯ ನಾಯಕರಾದ ವಿ.ಶ್ರೀನಿವಾಸಪ್ರಸಾದ್ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳ ಒಕ್ಕೂಟದ ಬಂಧುಗಳು ರಾಜಕೀಯ ಮುತ್ಸದ್ಧಿ “ವಿ.ಶ್ರೀನಿವಾಸಪ್ರಸಾದ್” ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ಮರಿಸಲಾಯಿತು.
ವಿ ಶ್ರೀನಿವಾಸ್ ಪ್ರಸಾದ್ ರವರನ್ನು ಕುರಿತು ಸಚಿವರಾದ ಹೆಚ್ ಸಿ ಮಹದೇವಪ್ಪ ರವರು ಮಾತನಾಡಿ ಪ್ರಸಾದ್ ರವರು ಸಂವಿಧಾನದ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡಿದ್ದರು ಆದ್ದರಿಂದಲೇ ಅವರು ಸ್ವಾಭಿಮಾನಿಯಾಗಿ ಬದುಕುತ್ತಾ ಇದ್ದವರು ಸುಮಾರು 50 ವರ್ಷಗಳ ಕಾಲ ತಮ್ಮ ಜೀವನವನ್ನು ರಾಜಕೀಯದಲ್ಲಿ ತೊಡಗಿಸಿಕೊಂಡು ಜನರ ಕಷ್ಟ ದುಃಖಗಳಲ್ಲಿ ಭಾಗವಹಿಸುತ್ತಿದ್ದರು ಇವರನ್ನು ಮೆಚ್ಚಿ ಚಾಮರಾಜನಗರ ಜಿಲ್ಲೆಯ ಜನತೆ ಆರು ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು
ಈ ಸಂದರ್ಭದಲ್ಲಿ ವಾಟಾಳು ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ನಳಂದ ಬುದ್ಧವಿಹಾರದ ಪೂಜ್ಯ ಭೋಧಿರತ್ನ ಬಂತೇಜಿ . ಪಶುಸಂಗೋಪನೆ ಸಚಿವರಾದ ಕೆ.ವೆಂಕಟೇಶ್ . ಶಾಸಕರಾದ ಎ.ಆರ್.ಕೃಷ್ಣಮೂರ್ತಿ . ಹಿರಿಯ ಪತ್ರಕರ್ತರಾದ ಕೆ.ಶಿವಕುಮಾರ್ . ಮಾಜಿ ಶಾಸಕರಾದ ಎಸ್ ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಕಾಡಾ ಅಧ್ಯಕ್ಷರಾದ ಪಿ.ಮರಿಸ್ವಾಮಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಚಂದ್ರು. ದಾಸ್.ಯೊಗೇಶ್. ಪುಟ್ಟಸುಬ್ಬಪ್ಪ.ರಾಚಯ್ಯ.ಕಮಲ್ ನಾಗರಾಜ್ ನಂಜುಂಡಸ್ವಾಮಿ. ನಿರಂಜನ್.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾದ್ ಅಭಿಮಾನಿಗಳು
ಉಪಸ್ಥಿತರಿದ್ದರು.