ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

Share

ಕಲಬುರಗಿ:- ನಮ್ಮ ದೇಶ ಸೇರಿದಂತೆ ವಿಶ್ವದಲ್ಲಿ ದಿನನಿತ್ಯಲೂ ನೂರಾರು ಅಮಾಯಕರ ಸಾವಿಗೆ ಕಾರಣವಾಗಿ, ಜಗತ್ತನ್ನು ತಲ್ಲಣಗೊಳಿಸಿ, ಅಶಾಂತಿಯುತವಾದ ವಾತಾವರಣದ ಸೃಷ್ಟಿಗೆ ಕಾರಣೀಕೃತವಾದ ಭಯೋತ್ಪಾದನೆ ಎಂಬುದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಇದು ತೊಡಕಾಗಿದ್ದು, ಇದರ ನಿರ್ಮೂಲನೆಗೆ ಎಲ್ಲರು ಜೊತೆಗೂಡಿ ಬೇರು ಸಹಿತ ಸರ್ವನಾಶ ಮಾಡುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ಭಯೋತ್ಪಾದನೆಗೆ ಎಂದಿಗೂ ಕೂಡಾ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಿ ಆಗಲಿ ಬೆಂಬಲಿಸುವುದು ದೇಶದ್ರೋಹ ಕೆಲಸವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಆಳಂದ ತಾಲೂಕಿನ ಬಸವಣ್ಣ ಸಂಗೋಳಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡುತ್ತಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಶಾಂತಿ, ಅಹಿಂಸೆ ಹಾಗೂ ಸಹನೆಗೆ ಹೆಸರಾದ ನಮ್ಮ ದೇಶದಲ್ಲಿ ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಅರಾಜಕತೆಯ ವಾತವರಣವನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಿವೆ. ಅದನ್ನು ನಾವೆಲ್ಲರು ಒಕ್ಕೋರಲಿನಿಂದ ಖಂಡಿಸುವ ಮೂಲಕ, ಅದರ ನಾಶಕ್ಕೆ ಶ್ರಮಿಸಬೇಕಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಗಜಾನಂದ ಶಿವಲಿಂಗಪ್ಪಗೋಳ, ಶಾಲೆಯ ಶಿಕ್ಷಕ ನಾಗರಾಜ ನಂದೆಪ್ಪಗೋಳ, ಗ್ರಾಮದ ಮಹಾದೇವಪ್ಪ ಬಿರಾದಾರ, ಸುನಂದಾ ಪೂಜಾರಿ, ಚನ್ನವೀರ ಪೂಜಾರಿ, ಅಂಬರೀಷ ಅಯ್ಯಪ್ಪಗೋಳ, ಮಹೇಶ ಜೋಗಿ, ಶ್ರೀಮಂತ ಬಿರಾದಾರ, ಪ್ರಮೋದ ನಂದೆಪ್ಪಗೋಳ, ಲತೀಶ್ ಬಿರಾದಾರ ಹಾಗೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.


Share