ದಾವಣಗೆರೆ: ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ

ದಾವಣಗೆರೆ: ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ

Share

ದಾವಣಗೆರೆ: ವಿನೋಬಾ ನಗರದಲ್ಲಿ ನೆಲೆಸಿದ್ದ ಕುಟುಂಬ ನಾಪತ್ತೆಯಾಗಿದೆ. ವಿನೋಬ ನಗರದ ನಿವಾಸಿಗಳಾದ ಪತಿ ಅಂಜನ್ ಬಾಬು (34), ಪತ್ನಿ ನಾಗವೇಣಿ (30) ಮತ್ತು 1 ವರ್ಷದ ಮಗು ನಕ್ಷತ್ರ ನಾಪತ್ತೆಯಾಗಿದ್ದಾರೆ.

ಏಪ್ರಿಲ್​ 12ರಿಂದ ಮನೆಯಿಂದ ಹೊರಹೋದವರು ವಾಪಸ್​​ ಬಂದಿಲ್ಲ. ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಎನ್ನುವ ನಿಖರ ಕಾರಣ ತಿಳಿದು ಬಂದಿಲ್ಲ. ಸಂಬಂಧಿಕರಿಗೂ ಯಾವುದೇ ಸೂಚನೆ, ಮಾಹಿತಿ ನೀಡಿಲ್ಲ. ಯಾವುದೇ ಪತ್ರ ಬರೆದಿಟ್ಟಿಲ್ಲ. ಹೀಗಾಗಿ ಇವರು ನಿಗೂಡವಾಗಿ ನಾಪತ್ತೆಯಾಗಿರುವ ಪ್ರಕರಣ ಕುತೂಹಲ ಕೆರಳಿಸಿದೆ. ನಾಪತ್ತೆ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share