ಪ್ಲಾಸ್ಟಿಕ್ ನಿರ್ಮೂಲನಾ ದಿನ ಆಚರಣೆ….

ಪ್ಲಾಸ್ಟಿಕ್ ನಿರ್ಮೂಲನಾ ದಿನ ಆಚರಣೆ….

Share

ಭಾರತ್ ಸ್ಕೌಟ್ ಎಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಕಳ, ಇಲ್ಲಿಯ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲಾ ಹೊರಗಿನ ಪರಿಸರದಲ್ಲಿ ದಿನಾಂಕ 20-06-2024 ರಂದು ಭೂಮಿಯನ್ನು ಧ್ಯೇಯವಾಗಿಟ್ಟುಕೊಂಡು ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಗೈಡರ್ ಸೀಮಾ ಕಾಮತ್ ಹಾಗೂ ಸ್ಕೌಟರ್ ಸುಜಾತ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಮ್ಮ ಕೈಯಾರೇ ಬಟ್ಟೆ ಬ್ಯಾಗಗಳನ್ನು ಹೊಲಿದು, ಇಂತಹುದೆ ಬ್ಯಾಗ್ ಗಳನ್ನು ಬಳಸುವಂತೆ ಕಾರ್ಕಳದ ಪರಿಸರದ ಜನರಿಗೆ ಕರೆಯಿತ್ತರು . ಈ ಕಾರ್ಯಕ್ರಮದಲ್ಲಿ ಮಕ್ಕಳು ಭೂಮಿಗೆ ವಿಪರೀತ ಪ್ಲಾಸ್ಟಿಕ್ ಬಳಕೆಯಿಂದಾಗುವ ತೊಂದರೆಗಳನ್ನು ತಿಳಿದುಕೊಂಡರು . ಶಾಲಾ ಮುಖ್ಯ ಶಿಕ್ಷಕಿ ಹಾಗೂ ಸಹಾಯಕ ಗೈಡ್ ಕಮಿಷನರ್ ವಿದ್ಯಾ ಕಿಣಿ ಅವರು ಬ್ಯಾಗ್ ಗಳನ್ನು ಜನರಿಗೆ ವಿತರಿಸಿದರು.


Share