ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿಗೆ ವರ್ಗಾವಣೆಗೊಂಡ ಸರಳ ಸಜ್ಜನ,ನಿಷ್ಠಾವಂತ ಜನಸ್ನೇಹಿ ಅಧಿಕಾರಿಯನ್ನು ಸನ್ಮಾನಿಸಿ ಬಿಳ್ಕೊಟ್ಟ ಅಂಕೋಲ ಸರ್ವೆ ಇಲಾಖೆಯ ಸಿಬ್ಬಂದಿ ವರ್ಗ.

ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿಗೆ ವರ್ಗಾವಣೆಗೊಂಡ ಸರಳ ಸಜ್ಜನ,ನಿಷ್ಠಾವಂತ ಜನಸ್ನೇಹಿ ಅಧಿಕಾರಿಯನ್ನು ಸನ್ಮಾನಿಸಿ ಬಿಳ್ಕೊಟ್ಟ ಅಂಕೋಲ ಸರ್ವೆ ಇಲಾಖೆಯ ಸಿಬ್ಬಂದಿ ವರ್ಗ.

Share

ಮಾನವ ಜನ್ಮ ದೊಡ್ಡದೋ ಇದ. ಹಾನಿ ಮಾಡಲು ಬೇಡಿ. ಹುಚ್ಚಪ್ಪಗಳಿರಾ? ಅನ್ನುವ ದಾಸರವಾಣಿಯು ಸತ್ಯವೇ ಅನ್ನುವದು ಎಲ್ಲರಿಗೂ ತಿಳಿದ ವಿಚಾರ. ಅಂತಹುದರಲ್ಲಿ ಕೆಲವರು ಹುಟ್ಟುತ್ತಾರೆ. ತಾವು ಏಕೆ ಹುಟ್ಟಿದ್ದೇವೆ ಅನ್ನುವದು ಅವರಿಗೆ ಗೊತ್ತಿರುವುದಿಲ್ಲ. ಮತ್ತೆ ಕೆಲವರು ಬದುಕುತ್ತಾರೆ ಬದುಕಿನ ಸಾರ್ಥಕವೇನು? ಎನ್ನುವುದರ ಪರಿವೆ ಮತ್ತು ಪರಿಜ್ಞಾನಗಳೇ ಇರುವುದಿಲ್ಲ! ಅದರಂತೆ ಇತ್ತೀಚಿನ ದಿನಗಳಲ್ಲಿ ಕೆಲವು ಅಧಿಕಾರಿಗಳು ಕಚೇರಿಯ ಪ್ರಮುಖ ಅಧಿಕಾರಿಯಾಗಿ ರೆಗ್ಯುಲರ್ ಆಗಿಯೋ ಅಥವಾ ಪ್ರಭಾರಿಯಾಗಿಯೋ ಅಧಿಕಾರವಹಿಸಿಕೊಂಡಾಗ ತಮ್ಮಲ್ಲಿರುವ ವಿವೇಕ ಹಾಗೂ ವಿವೇಚನೆಯಿಂದ ಸಾವಿರಾರು ಕುಟುಂಬಗಳ ಬದುಕು ಹಸನು ಮಾಡುವುದನ್ನು ಬಿಟ್ಟು ಸ್ವಾರ್ಥ. ಸ್ವಜನ್ ಪಕ್ಷಪಾತ. ಹಣದಾಸೆಗೆ ಬಡವರ ಜೀವನದ ಜೊತೆ ಚೆಲ್ಲಾಟ ಆಡುವ ಅಧಿಕಾರಿಗಳು. ಹಮ್ಮು -ಬಿಮ್ಮು ಗಳನ್ನು ನೆತ್ತಿಗೇರಿಸಿಕೊಂಡ. ಅನುಕಂಪ ಗಳಿಗಿಂತ ಗತ್ತು -ಗೈರುತ್ತುಗಳು ಹೆಚ್ಚಾಗಿರುವ ಅಧಿಕಾರಿಗಳನ್ನು ಈ ದಿನಮಾನಗಳಲ್ಲಿ ಕಾಣುತ್ತೇವೆ.ಆದರೆ ಅಂಕೋಲ ತಾಲೂಕಿನ ಸರ್ವೆ ಇಲಾಖೆಗೆ 2 ವರ್ಷಗಳಿಂದ ಪ್ರಭಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದ ಮೈಸೂರು ಮೂಲದ ಸುಂದರ್ ರವರು ತಮ್ಮ ಸಮಾಜಮುಖಿ ಚಿಂತನೆ. ತಮ್ಮ ಸರಳತೆ. ಸಜ್ಜನಿಕೆ. ಮಾನವೀಯ ಗುಣ ವಿಶೇಷಣಗಳಿಂದ. ವಿಶಿಷ್ಟವಾದ ದೃಷ್ಟಿಕೋನದ ಸಾಧನೆಗಳಿಂದ ತಮ್ಮ ಕೆಳಹಂತದ ಸಿಬ್ಬಂದಿ ವರ್ಗದ ನೆಚ್ಚಿನ ಅಧಿಕಾರಿಯಾಗಿ ಜೊತೆಗೆ ಜನಸಾಮಾನ್ಯರ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.ಸುಂದರ ರವರಿಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಬಡ್ತಿ ನೀಡಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸರ್ಕಾರ ವರ್ಗಾವಣೆ ಗೊಳಿಸಿದೆ.ಒಂದು ಕಡೆಯಲ್ಲಿ ಸುಂದರವರು ಮೂಲ ಭೂ ದಾಖಲೆಗಳ ಅಧೀಕ್ಷಕ ಹುದ್ದೆಯಿಂದ ಪ್ರಭಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಅಂಕೋಲದಲ್ಲಿ ಹಾಗೂ ಕುಮಟದಲ್ಲಿ ಕರ್ತವ್ಯ ನಿರ್ವಹಿಸಿದ ಇವರಿಗೆ ರೆಗ್ಯುಲರ್ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಬಡ್ತಿ ಪಡೆದ ಖುಷಿಯಲ್ಲಿ ಸುಂದರವರು ಇದ್ದರೆ. ಇನ್ನೊಂದು ಕಡೆಯಲ್ಲಿ ನೆಚ್ಚಿನ ಸರಳ ಸಜ್ಜನಿಕೆಯ ಅಧಿಕಾರಿ ಅಂಕೋಲದಲ್ಲಿ ಇನ್ನು ಮುಂದೆ ಇರುವುದಿಲ್ಲ ಎಂದು ಸುಂದರವರ ಒಳ್ಳೆಯ ವ್ಯಕ್ತಿತ್ವದ ಬಗ್ಗೆ ಸರ್ವೆ ಇಲಾಖೆಯ ಪ್ರಥಮ ದರ್ಜೆ ಅಧಿಕಾರಿಗಳಿಂದ ಹಿಡಿದು ಜವಾನ ಹುದ್ದೆಯ್ ಎಲ್ಲಾ ಸಿಬ್ಬಂದಿ ವರ್ಗದವರು ಇವರನ್ನು ನೆನೆಸಿಕೊಳ್ಳುವುದು ಕಂಡುಬಂತು..ಇದೇ ಸಂದರ್ಭದಲ್ಲಿ ಅಂಕೋಲಾದಲ್ಲಿ 2 ವರ್ಷಗಳ ಕಾಲ ಪ್ರಭಾರಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ಇವರನ್ನು ಅಂಕೋಲ ತಾಲೂಕ ಸರ್ವೇಯರ್ ರೋಷನ ಬಂಟ್ .ಸೂಪರ್ವೈಸರ್ ಸಂದೀಪ್. ಮಹಿಳಾ ಸಿಬ್ಬಂದಿಗಳಾದ ಐಶ್ವರ್ಯ. ಯಶೋಧ. ಪ್ರತಿಕ್ಷ. ಲೈಸೆನ್ಸ್ ಸರ್ವೆರ್ಗಳಾದ ಈಶ್ವರಯ್ಯ. ಸೂರಜ್.. ಬಾಂಧ ಜವಾನ ವಿನಾಯಕ್ ಆಗೇರ. ನವೀನ್ ನಾಯ್ಕ್ ಹಾಗೂ ಅನೇಕ ಸಿಬ್ಬಂದಿಗಳು ಒಟ್ಟಾಗಿ ಸುಂದರವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಥಾನಮಾನಗಳು ಸಿಗಲಿ ಎಂದು ಆತ್ಮೀಯವಾಗಿ ಶುಭಹಾರೈಸಿ ಬಿಳ್ಕೊಟ್ಟರು.ಅಂಕೋಲಾದ ಭೂ ದಾಖಲೆಗಳ ಸಹಾಯಕ ನಿರ್ದೇಶಕರಾಗಿ ಈ ಹಿಂದೆ ಆರು ತಿಂಗಳುಗಳ ಕಾಲ ಕರ್ತವ್ಯವನ್ನು ನಿರ್ವಹಿಸಿದ್ದ ವಿನೋದ್ ರಾಥೋಡ್ ರವರಿಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಇಂಚಾರ್ಜನ್ನು ನೀಡಲಾಗಿದೆ ಇವರನ್ನು ಕೂಡ ಸರ್ವೇ ಇಲಾಖೆ ಸಿಬ್ಬಂದಿಗಳು  ಸ್ವಾಗತಿಸಿದರು.


Share