10 ತಿಂಗಳಿನಿಂದ ವೇತನ ಆಗದೆ ಪರದಾಡುತ್ತಿರುವ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರು…!

10 ತಿಂಗಳಿನಿಂದ ವೇತನ ಆಗದೆ ಪರದಾಡುತ್ತಿರುವ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರು…!

Share

ಜೇವರ್ಗಿ ಸುದ್ದಿ : ಜೆವರ್ಗಿ ತಾಲೂಕಿನ ಸುಮಾರು ಅಂದಾಜು 150 ಪದವಿದರ ಪ್ರಾಥಮಿಕ ಶಾಲಾ ಶಿಕ್ಷಕರು ಜೇವರ್ಗಿ ತಾಲೂಕಿನಲ್ಲಿ ಹೊಸದಾಗಿ ನೇಮಕವಾಗಿದ್ದು ಇವರಿಗೆ 10 ತಿಂಗಳು ಆದರೂ ವೇತನ ವಿಲ್ಲದೆ ಜೀವನ ಮಾಡುವುದು ತುಂಬಾ ಕಷ್ಟವಾಗಿದೆ.
ಈ ವಿಷಯವನ್ನು ಅರಿತ ಮಾನ್ಯ ಡಿ ಡಿ ಪಿ ಐ ಕಲಬುರ್ಗಿಯವರು ಜೆವರ್ಗಿ Beoಅವರಿಗೆ ಒಂದು ವಾರದಲ್ಲಿ ಅಂದರೆ ಮೇ ತಿಂಗಳಲ್ಲಿಯೇ ಹೊಸದಾಗಿ ನೇಮಕವಾದ ಎಲ್ಲಾ ಶಿಕ್ಷಕರ ವೇತನ ಮಾಡಲು ಆದೇಶ ಮಾಡಿದರು ಕೂಡ  ಮಾನ್ಯ ಜೇವರ್ಗಿ Beo ಅವರು ಈ ಬಗ್ಗೆ ಇನ್ನೂ ಸಂಪೂರ್ಣ ಆದೇಶ ಪಾಲಿಸಿರುವುದಿಲ್ಲ .ಹೀಗಾಗಿ ಸುಮಾರು 150 ಜನ ಪದವೀಧರ ಪ್ರಾಥಮಿಕ ಶಾಲಾ ಎಲ್ಲಾ ಶಿಕ್ಷಕರ ವೇತನವು ಒಂದು ವಾರದಲ್ಲಿ ಬಿಡುಗಡೆ ಮಾಡದಿದ್ದರೆ ಮುಂದಿನ ಆಗು ಹೋಗುಗಳಿಗೆ ಬಿಇಒ ಅವ್ರು ಜವಾಬ್ದಾರರಾಗುತಾರೆ ಎಂದು ನೊಂದ ಶಿಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…


Share