ಸಕ್ಕನಹಳ್ಳಿ ಗ್ರಾಮದ ಸ್ಮಶಾನವನ್ನು ಉಳಿಸಿಕೊಡುತ್ತೇನೆ ತಹಶೀಲ್ದಾರ್ ರಶ್ಮಿ…..

ಸಕ್ಕನಹಳ್ಳಿ ಗ್ರಾಮದ ಸ್ಮಶಾನವನ್ನು ಉಳಿಸಿಕೊಡುತ್ತೇನೆ ತಹಶೀಲ್ದಾರ್ ರಶ್ಮಿ…..

Share

ಬಂಗಾರಪೇಟೆ :ಕೆಲ ಕಿಡಿಗೇಡಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಸಕ್ಕನಹಳ್ಳಿ ಗ್ರಾಮದಲ್ಲಿರುವ ಸ್ಮಶಾನ ಜಾಗವನ್ನು ಮಹೇಶ್‌ ರೆಡ್ಡಿ ಎಂಬುವವರ ಹೆಸರಿಗೆ ನಕಲಿ ಖಾತೆಗಳನ್ನು ಮಾಡಲು ಮುಂದಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕುಪೇಂದ್ರ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ತಹಶೀಲ್ದಾರ್ ರಶ್ಮಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಈ ವೇಳೆ ತಹಶೀಲ್ದಾರ್ ರಶ್ಮಿ ಮಾತನಾಡಿ,ಸಕ್ಕನಹಳ್ಳಿ ಗ್ರಾಮದ ಸರ್ವೆ ನಂ.19 ರಲ್ಲಿ ಪೌತಿ ಖಾತೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.ಈ ವೇಳೆ ಗ್ರಾಮಸ್ಥರಿಂದ ತಕರಾಲು ಅರ್ಜಿ ಬಂದ ಹಿನ್ನೆಲೆ, ಕೆಲವೊಂದು ಸರ್ವೇ ನಂಬರಗಳಲ್ಲಿ ಸ್ಮಶಾನ ಹಾಗೂ ಕೆರೆಕುಂಟೆಗಳಿವೆ ಎಂದು ಗಮನಕ್ಕೆ ಬಂದ ಹಿನ್ನೆಲೆ ಸ್ಥಳಕ್ಕೆ ಇಂದು ಬೇಟಿ ನೀಡಲಾಗಿದೆ ಎಂದರು.ಸ್ಥಳೀಯ ಗ್ರಾಮಸ್ಥರಿಂದ ಮಾಹಿತಿಯನ್ನು ಪಡೆಯಲಾಗಿದೆ ಹಾಗೂ ನಮಗೆ ಕಂಡು ಬಂದಂತೆ ಸರ್ವೇ ನಂಬರ್ 19ರಲ್ಲಿ ಸ್ಮಶಾನ ಇರುವುದು ಕಂಡು ಬಂದಿದೆ ಸುಮಾರು ಜನರನ್ನು ಇಲ್ಲಿ ಉಳಿದ್ದಾರೆ.ಈ ಒಂದು ಜಾಗದ ಸರ್ವೇ ದಾಖಲೆಗಳು ಹಾಗೂ ಕಂದಾಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿ ಗ್ರಾಮಕ್ಕೆ ಸ್ಮಶಾನ ಜಾಗವನ್ನು ಉಳಿಸಿಕೊಡುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.ಈ ವೇಳೆ ಸಕ್ಕನಹಳ್ಳಿ ಗ್ರಾಮದ ಸದಸ್ಯರಾದ ಕುಪೇಂದ್ರ ಮಾತನಾಡಿ, ಗ್ರಾಮದ ಸ್ಮಶಾನ ಜಾಗವನ್ನು ನಕಲಿ ಖಾತೆಗಳನ್ನು ಮಾಡಿ ಜಮೀನುಗಳನ್ನು ಹೊಡೆಯಲು ಪ್ರಯತ್ನ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆ ಯಾವುದೇ ಕಾರಣಕ್ಕೂ ಗ್ರಾಮದ ಸ್ಮಶಾನ ಜಾಗವಾದ ಸರ್ವೇ ನಂಬರ್ 19ನ್ನು ಖಾತೆ ಮಾಡಬಾರದೆಂದು ತಕರಾರು ಅರ್ಜಿ ಸಲ್ಲಿಸಲಾಗಿತ್ತು ಅದರಂತೆ ಎಂದು ತಹಶೀಲ್ದಾರ್ ರಶ್ಮಿ ರವರು ಭೇಟಿಕೊಟ್ಟು ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ಜಾಗ ಹಾಗೂ ಸ್ಮಶಾನವನ್ನು ಉಳಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೇಕ್ಕಾಧಿಕಾರಿ ರಂಜಿತಾ ಮತ್ತು ಸಂಖ್ಯೆಯಲ್ಲಿ ಗ್ರಾಮಸ್ಥರು  ಮುಖಂಡರು ಭಾಗವಹಿಸಿದ್ದರು.


Share