ಹಾಸನ : ಅರಸೀಕೆರೆ ನಗರದ ನಗರ ಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವಸತಿಗೃಹ ನಿರ್ಮಾಣದ ಉದ್ದೇಶಕ್ಕಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಸಿ ಸತ್ಯ ಭಾಮರವರು ಎರಡು ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ಆದೇಶ ಮಾಡಿದ್ದಾರೆ ಇದಕ್ಕಾಗಿ ಜಿಲ್ಲಾಧಿಕಾರಿಗಳಾದ ಸತ್ಯಭಾಮ ರವರಿಗೆ ಅರಸೀಕೆರೆ ನಗರಸಭೆಯ. ಎಲ್ಲಾ ಸಿಬ್ಬಂದಿಗಳು ಪೌರಕಾರ್ಮಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆಂದು
ಅರಸೀಕೆರೆ ನಗರಸಭೆ ಅಧ್ಯಕ್ಷರಾದ ಎಂ ಸಮಿವುಲ್ಲಾ ಹೇಳಿದರು., ನಗರಸಭೆ ಆವರಣದಲ್ಲಿ ಪೌರಕಾರ್ಮಿ ಕರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ಪೌರಕಾರ್ಮಿಕ ವಸತಿಗೃಹ ನಿರ್ಮಾಣಕ್ಕಾಗಿ
ಜಮೀನು ನೀಡಿದ್ದು ಅದು ಕಲ್ಲು ಬಂಡೆಗಳಿಂದ ಕೂಡಿದ್ದು ಜನವಸತಿಗೆ ವ್ಯವಸ್ಥಿತವಾಗಿರಲಿಲ್ಲ ಈ ಉದ್ದೇಶದಿಂದ ಅರಸೀಕೆರೆಯ ತಹಶೀಲ್ದಾರ್ ಅವರ ಮುಖಾಂತರ ವ್ಯವಸ್ಥಿತ ಜಾಗವನ್ನು ಗುರುತಿಸಿ
ಹಾಸನ ಉಪ ವಿಭಾಗಾಧಿಕಾರಿಗಳ ಮುಖಾಂತರ., ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು ಮನವಿಗೆ ಸ್ಪಂದಿಸಿದ
ಜಿಲ್ಲಾಧಿಕಾರಿಗಳು ಪೌರಕಾರ್ಮಿಕ ವಸತಿ ಗೃಹ ನಿರ್ಮಾಣದ ಉದ್ದೇಶಕ್ಕಾಗಿ ಎರಡು ಎಕರೆ ಜಮೀನನ್ನು ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ಮಂಜೂರು ಮಾಡಿರುವುದು ನಮಗೆ ಸಂತಸವಾಗಿದೆ ಇದಕ್ಕಾಗಿ
ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆಎಂ ಶಿವಲಿಂಗೇಗೌಡರಿಗೆ ಹಾಗೂ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ರವರಿಗೆ. ಮತ್ತು
ಇದಕ್ಕಾಗಿ ಶ್ರಮಿಸಿದ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ನಗರಸಭೆ ಪೌರಕಾರ್ಮಿಕರ ವತಿಯಿಂದ ನನ್ನ ವೈಯಕ್ತಿಕವಾಗಿಯೂ ಸಹ ಅಭಿನಂದಿಸುವುದಾಗಿ ನಗರಸಭಾ ಅಧ್ಯಕ್ಷರಾದ ಎಂ ಸಮಿಉಲ್ಲಾ ಹೇಳಿದರು ಉಪಾಧ್ಯಕ್ಷರಾದ ಮನೋಹರ್ ನಗರ ಸಭಾ ಸದಸ್ಯರುಗಳಾದ ಇಮ್ರಾನ್ ಖಾನ್ ದರ್ಶನ್ ಮತ್ತು
ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ನಗರಸಭೆಯ ಅಧಿಕಾರಿಗಳು ಮತ್ತು ನಗರಸಭೆಯ ಸಮಸ್ತ ಪೌರ ಕಾರ್ಮಿ ಕರು ಉಪಸ್ಥಿತರಿದ್ದರು
ವರದಿ ಪರ್ವಿಜ್ ಅಹಮದ್ ಹಾಸನ