ಶಿವಮೊಗ್ಗ ಹೊನ್ನಾವರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಸುರಕ್ಷತೆ ಇಲ್ಲದೆ ತಮ್ಮಡಿಹಳ್ಳಿ. ಸಿರಿಗೆರೆ. ಆಯನೂರು. ಮಾರ್ಗವಾಗಿ ಮಣ್ಣು ತುಂಬಿದ ಬ್ಬಾರಿ ಗಾತ್ರದ ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿ ಮಣ್ಣಿನ ಮೇಲೆ ಯಾವುದೇ ಟಾರ್ಪಲ್ ಹಾಕದೆ ಮನಸ್ಸಿಗೆ ಬಂದ ವೇಗದಲ್ಲಿ ಎಕ್ಸೆಲ್ ಬಾರ ಕ್ಕಿಂತ ಹೆಚ್ಚಿನ ತೂಕ ಹೊತ್ತು ಸಂಚರಿಸುತ್ತಿದ್ದು ಇದು ಒಂದು ಮಾಫಿಯಾ ಕೂಡ ಆಗಿದ್ದು ಇವರಿಗೆ ಹೇಳುವವರು ಕೇಳುವವರೇ ಇಲ್ಲದಂತಾಗಿದೆ ಈ ವಾಹನದ ಹಿಂದೆ ಹೋಗುವ ದ್ವಿಚಕ್ರ ವಾಹನ ಸವಾರರಿಗೆ ಮಣ್ಣು ತುಂಬಿದ ಲಾರಿಗಳಿಂದ ಗಾಳಿಯ ರಬಸಕ್ಕೆ ಹಾರುವ ಮಣ್ಣು ಕಣ್ಣಿಗೆ ಬೀಳುವುದಲ್ಲದೆ ಅದೆಷ್ಟು ಅಪಘಾತಗಳು ಸಂಭವಿಸಿದ್ದರು ಸಂಚಾರಿ ಪೊಲೀಸ್ ಆಗಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಾಗಲಿ ಸಂಬಂಧಪಟ್ಟ ಯಾವುದೇ ಇಲಾಖೆಗಳು ತಲೆಕೆಡಿಸಿಕೊಳ್ಳದೆ ಇರುವುದನ್ನು ಗಮನಿಸಿದರೆ ಈ ಮಾಫಿಯಾದಲ್ಲಿ ಅವರ ಪಾಲು ಇರಬಹುದು ಎನ್ನುವ ಸಂದೇಹಗಳು ಸಹಜವಾಗಿ ಮೂಡುತ್ತವೆ. ಈ ಮಣ್ಣು ತುಂಬಿದ ಬಾರಿ ವಾಹನಗಳು ಅತಿ ವೇಗದಲ್ಲಿ ಚಲಿಸುವುದಲ್ಲದೆ ಹಿಂದೆ ಬರುವ ವಾಹನಗಳಿಗೆ ಯಾವುದೇ ಕಾರಣಕ್ಕೂ ದಾರಿ ಬಿಟ್ಟುಕೊಡುವುದಿಲ್ಲ ಇಷ್ಟೆಲ್ಲಾ ಕಿರಿಕಿರಿ ಆಗುತ್ತ ಇದ್ದರು ಸಂಬಂಧಪಟ್ಟ ಯಾವುದೇ ಇಲಾಖೆಯವರು ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ.
ಎಂ .ಹೆಚ್ ರಾಘವೇಂದ್ರ ಸಂಪೋಡಿ