ಡಾ: ಎಸ್.ವಿ. ಸವಡಿ ಆರ್ಯುವೇದಿಕ್ ಆಸ್ಪತ್ರೆ ಗಂಗಾವತಿ ಇವರ ಪ್ರಾಯೊಜಕತ್ವದಲ್ಲಿ ಜೂನ್-೨೧ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.

ಡಾ: ಎಸ್.ವಿ. ಸವಡಿ ಆರ್ಯುವೇದಿಕ್ ಆಸ್ಪತ್ರೆ ಗಂಗಾವತಿ ಇವರ ಪ್ರಾಯೊಜಕತ್ವದಲ್ಲಿ ಜೂನ್-೨೧ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ.

Share

ಗಂಗಾವತಿ:ಅದರ ನಿಮಿತ್ಯವಾಗಿ ದಿನಾಂಕ ೨೦-೦೬-೨೦೨೪ ರ ಗುರುವಾರ ಬೆಳಿಗ್ಗೆ ೯-೦೦ ಗಂಟೆಗೆ ಯೋಗ ಜಾಗೃತಿ ಜಾಥಾವನ್ನು ಎ.ಪಿ.ಎಮ್.ಸಿ ಆವರಣದ ಶ್ರೀ ಚನ್ನಬಸವಸ್ವಾಮಿ ದೇವಸ್ಥಾನದಿಂದ ಪ್ರಾರಂಭಿಸಿ ಸಿಬಿಎಸ್ ವೃತ್ತ, ಗಾಂಧಿ ಸರ್ಕಲ್, ಬಸವಣ್ಣ ಸರ್ಕಲ್ ಮುಖಾಂತರವಾಗಿ ಕೊಟ್ಟುರು ಬಸವೆಶ್ವರ ದೇವಸ್ಥಾನ ಆವರಣದವರೆಗೆ ನಡೆಸಲಾಗುವುದು.ಹಾಗೂ ಜೂನ್-೨೧ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನಿಯರ್ ಕಾಲೇಜ ಮೈದಾನದಲ್ಲಿ ಬೆಳಿಗ್ಗೆ ೬-೦೦ ಗಂಟೆಗೆ ಮಾನ್ಯ ಶಾಸಕರಾದ ಶ್ರೀ ಗಾಲಿ ಜನಾರ್ದನರಡ್ಡಿ ಇವರು ಉದ್ಘಾಟಿಸುವರು ಹಾಗೂ ಈ ಮೇಲಿನ ಎರಡು ಕಾರ್ಯಕ್ರಮಗಳಲ್ಲಿ ನಗರದ ಎಲ್ಲಾ ಇಲಾಖೆಯ ಅಧಿಕಾರಿಗಳು, ವಿವಿಧ ಸಂಫಟನೆಗಳು ಮತ್ತು ಶಾಲಾ–ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸುವವು.ಈ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶಾಂತವೀರ ಸ್ವಾಮಿ, ಡಾ. ಎಸ್.ಬಿ. ಹಂದ್ರಾಳ್, ನೂಲ್ವಿ ಮಲ್ಲಿಕಾರ್ಜುನ, ಶಾಮಮೂರ್ತಿ ಐಲಿ, ಆರ್ಟ್ ಆಫ್ ಲಿವಿಂಗ್, ಪತಂಜಲಿ ಯೋಗ ಸಮಿತಿ, ಪತಂಜಲಿ ಯೋಗ ಸಮಿತಿ, ಸ್ನೇಹ ಬಳಗ, ಯೋಗ ಶಿಕ್ಷಕರು, ರಾಜ್ಯ ಸದ್ಯಸರು, ಅಧ್ಯಕ್ಷರು-ಗಂಗಾವತಿ ಸಂಘಟನೆಗಳು ಭಾಗವಹಿಸಲಿವೆ.


Share