ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಹಣ ದುರ್ಬಳಕೆ ಅಕ್ರಮ ಕೋವಿಡ್ ಹಣ ೧೨ಮಂದಿ ಖಾತೆಗೆಳಿಗೆ ಜಮೆ, ಅಧಿಕಾರಿಗಳ ಅಮಾನತ್ತುಪಡಿಸಲು ಡಿಸಿಗೆ ದೂರು….

ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಹಣ ದುರ್ಬಳಕೆ ಅಕ್ರಮ ಕೋವಿಡ್ ಹಣ ೧೨ಮಂದಿ ಖಾತೆಗೆಳಿಗೆ ಜಮೆ, ಅಧಿಕಾರಿಗಳ ಅಮಾನತ್ತುಪಡಿಸಲು ಡಿಸಿಗೆ ದೂರು….

Share

ಕೋಲಾರ: ಜಿಲ್ಲಾಸ್ಪತ್ರೆಯ (ಎಸ್.ಎನ್.ಆರ್) ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಜಿ.ನಾರಾಯಣಸ್ವಾಮಿ ಅವರು ಹಾಗೂ ತನ್ನ ಅಧೀನ ನೌಕರರು, ಕೋವಿಡ್ ಸಮಯದಲ್ಲಿ ಬಹುಕೋಟಿ ಸರಕಾರಿ ಹಣ ದುರುಪಯೋಗ ಹಾಗೂ ಸ್ವಂತ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ದೂರು ಸಲ್ಲಿಸಲಾಯಿತು. ಕೋಲಾರ ಜಿಲ್ಲೆಯ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಕೋವಿಡ್ ಸಮಯದಲ್ಲಿ ಸರ್ಕಾರಿ ಬಹುಕೋಟಿ ರೂಪಾಯಿಗಳನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿರುವ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಜಿ.ನಾರಾಯಣಸ್ವಾಮಿ ಇವರ ವಿರುದ್ದ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ತಾವು ತಕ್ಷಣವೇ ಡಾ.ಎಸ್.ಜಿ.ನಾರಾಯಣಸ್ವಾಮಿ ತನ್ನ ಖಾತೆಗೆ ೮,೨೦ಲಕ್ಷ ಹಾಗೂ ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ.ಗ್ರೂಪ್ ನೌಕರ ಸೋಮಶೇಖರ್ ೪,೨೩,೬೮೪/-, ಶ್ರೀನಿವಾಸ್ ೯,೪೨,೦೪೦/-, ಪ್ರಶಾಂತ್ ೭,೪೦,೮೫೦/-, ಸಂಜಯ್ ೬೮,೩೦೦/-, ಆಡಿಟರ್ ಪುರುಷೋತ್ತಮ್ ೧,೨೨,೮೬೪/-, ಆರೋಗ್ಯ ಮಿತ್ರ ಪ್ರಸನ್ನ ೬೮,೭೯೨/-, ಮನೋಹರ್ ಬಾಬು ೬೨,೫೫೭/-, ಕೃಷ್ಣಪ್ಪ ೩,೧೫,೬೭೯/-, ರೂಗಳನ್ನು ಹಾಗೂ ಇನ್ನಿತರ ನೌಕರರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವುದು ಕಂಡುಬAದಿರುತ್ತದೆ. ಆಗಾಗಿ ೧೨ಮಂದಿ ನೌಕರರನ್ನು ಹುದ್ದೆಯಿಂದ ಅಮಾನತ್ತುಗೊಳಿಸಿ ಇವರುಗಳ ವಿರುದ್ದ ಸೂಕ್ತ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಂಚನೆ ಮಾಡಿರುವ ಬಹುಕೋಟಿ ಮೊತ್ತವನ್ನು ಡಾ.ಎಸ್.ಜಿ.ನಾರಾಯಣಸ್ವಾಮಿ ರವರಿಂದ ಬಡ್ಡಿ ಸಮೇತ ವಸೂಲು ಮಾಡಬೇಕೆಂದು ಬಂಗಾರಪೇಟೆ ದೇಶಿಹಳ್ಳಿ ನಿವಾಸಿ ಸಾಮಾಜಿಕ ಕಾರ್ಯಕರ್ತ ಎಲ್.ಕೇಶವಮೂರ್ತಿ ಅವರು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.ಅವರು ಮಾತನಾಡಿ, ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದ ಮುಖ್ಯ ಲೆಕ್ಕಪತ್ರಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರಾದ ಬೀನಾ.ಕೆ, ರವರು ಆಡಿಟ್ ಮಾಡಲಾಗಿದ್ದು, ಬಹುಕೋಟಿ ಮೊತ್ತ ಡಾ.ಎಸ್.ಜಿ.ನಾರಾಯಣಸ್ವಾಮಿ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕರು ದುರುಪಯೋಗದ ವಿಚಾರದಲ್ಲಿ ಸಾಬೀತಾಗಿರುತ್ತದೆ.ಆರೋಗ್ಯ ರಕ್ಷಾ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ತಮ್ಮ ಅನುಮೋದನೆ ಇಲ್ಲದೇ ಏಕಪಕ್ಷೀಯವಾಗಿ ಡಾ.ಎಸ್.ಜಿ.ನಾರಾಯಣಸ್ವಾಮಿ ರವರು ಏಕಾಂಗಿಯಾಗಿ ವ್ಯವಹರಿಸಿ ಬಹುಕೋಟಿ ರೂಪಾಯಿ ವಂಚಿಸಿದ್ದಾರೆ. ಈ ಕಾರಣಕ್ಕಾಗಿಯೇ ೨೧೮ ಕಡತಗಳು ಹಸ್ತಾಂತರ ಮಾಡದಿರಲು ಕಾರಣವಾಗಿದೆ. ಹಾಗೂ ಆರೋಗ್ಯ ರಕ್ಷಾ ಸಮಿತಿಯ ಮೊತ್ತ ಸಂಬAಧಿಸಿದವರಿಗೆ ಪಾವತಿಸದೇ ನಿಯಮಗಳ ವಿರುದ್ದವಾಗಿ ಗುತ್ತಿಗೆ ನೌಕರರ ಖಾತೆಗೆ ಜಮೆ ಮಾಡಿದ್ದು ಅವರಿಂದ ಡಾ.ಎಸ್.ಜಿ. ನಾರಾಯಣಸ್ವಾಮಿ ರವರು ಹಣವನ್ನು ಪಡೆದು ದುರುಪಯೋಗ ಮಾಡಿಕೊಂಡಿರುತ್ತಾರೆ. ಕೋಟ್ಯಾತರ ರೂಪಾಯಿಗಳ ದುರುಪಯೋಗದ ವಿಚಾರದಲ್ಲಿ ಸಂಬದಿಸಿದ ೨೧೮ ಕಡತಗಳು ಡಾ.ಎಸ್.ಜಿ. ನಾರಾಯಣಸ್ವಾಮಿ ರವರು ನಿವೃತ್ತಿ ಹೊಂದಿ ಎರಡು ವರ್ಷವಾದರೂ ಈ ದಿನದವರೆಗೂ ಹಸ್ತಾಂತರಿಸದೇ ಇರುವುದು ಬಹುಕೋಟಿ ಹಗರಣಕ್ಕೆ ನಾಂದಿಯಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ (ಪ್ರ) ಕಾರ್ಯದರ್ಶಿಗಳಾದ ಶ್ರೀಲತಾ ಹೆಚ್.ಟಿ ರವರು ಸರ್ಕಾರಿ ಹಣ ದುರುಪಯೋಗ ಹಾಗೂ ಸರ್ಕಾರಿ ಕಡತಗಳನ್ನು ನಾಪತ್ತೆ ಮಾಡಿರುವ ಅಧಿಕಾರಿ ನೌಕರರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಆದೇಶಿರುತ್ತಾರೆ. ೨೧೮ ಕಡತಗಳನ್ನು ಡಾ.ಎಸ್.ಜಿ.ನಾರಾಯಣಸ್ವಾಮಿ ಅವರಿಂದ ಹಿಂಪಡೆದು ತನಿಖೆ ನಡೆಸಿದರೆ ಬಹುಕೋಟಿಗಳ ಅಗರಣ ಬೆಳಕಿಗೆ ಬರುತ್ತದೆ. ಆದ್ದರಿಂದ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ತ್ವರಿತಗತಿಯಲ್ಲಿ ಡಾ.ಎಸ್.ಜಿ.ನಾರಾಯಣಸ್ವಾಮಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.


Share