ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ಯಡ್ರಾಮಿ ತಾಲೂಕ ಜಯ ಕರ್ನಾಟಕ ಸಂಘಟನಾ ತಾಲೂಕ ಅಧ್ಯಕ್ಷ ಚಂದ್ರು ಮಲ್ಲಾಬಾದ್ ಆಕ್ರೋಶ…

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರುದ್ಧ ರಾಜ್ಯ ಸರ್ಕಾರದ ವಿರುದ್ಧ ಯಡ್ರಾಮಿ ತಾಲೂಕ ಜಯ ಕರ್ನಾಟಕ ಸಂಘಟನಾ ತಾಲೂಕ ಅಧ್ಯಕ್ಷ ಚಂದ್ರು ಮಲ್ಲಾಬಾದ್ ಆಕ್ರೋಶ…

Share

ಯಡ್ರಾಮಿ ಸುದ್ದಿ ಕೋವಿಡ್ ನಿಂದ ಕಂಗೆಟ್ಟು ಇದೀಗ ರಾಜ್ಯದ ಜನತೆ ಚೇತರಿಸಿಕೊಳ್ಳುವಷ್ಟರಲ್ಲಿ ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ ಮತ್ತೊಂದು ಕಡೆ ಉಚಿತ ಯೋಜನೆ ಅಂತ ಹೇಳಿ ಕರ್ನಾಟಕ ರಾಜ್ಯವನ್ನು ದಿವಾಳಿ ಹಂಚಿಗೆ ತಂದು ನಿಲ್ಲಿಸಿದೆ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಮೀನಾ ಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ಉಚಿತ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದು ಆಗಿದೆ ಅದು ಕೂಡ ಘೋಷಣೆಯಾಗಿ ಉಳಿದಿದೆ ಅದೇ ರೀತಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಅಡಿಯಲಿ ರಾಜ್ಯದ ಪ್ರತಿ ಪ್ರೌಢಶಾಲೆಯಲ್ಲಿ ಸ್ವಯಂ ರಕ್ಷಣಾ ತರಬೇತಿ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿತ್ತು ಈ ಅನುದಾನವು ಕೂಡ ನಿಲ್ಲಿಸಲಾಗಿದೆ ಅದೇ ರೀತಿಯಾಗಿ ಒಂದು ಕಡೆ ಉಚಿತ ಯೋಜನೆ ಜಾರಿ ಮಾಡಿದ ರಾಜ್ಯ ಸರ್ಕಾರ ಮತ್ತೊಂದು ಕಡೆ ಬೆಲೆ ಏರಿಕೆಯ ಹೊಡೆಥ ಸಕತ್ತಾಗಿ ಕೊಟ್ಟಿದ್ದಾರೆ 11 ತಿಂಗಳಲ್ಲಿ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಸಾಲ1.91.000 ಕೋಟಿ ರಾಜ್ಯದ ಪ್ರತಿ ಕನ್ನಡಿಗನ ತಲೆಯ ಮೇಲೆ11 ತಿಂಗಳಿಗೆ31.833 ರೂಪಾಯಿ ಸಾಲ ಹಾಗಾದ್ರೆ 5 ವರ್ಷಕ್ಕೆ ಪ್ರತಿ ಕನ್ನಡಿಗನ ತಲೆಯ ಮೇಲೆ 1.5 ಲಕ್ಷ ಸಾಲ ಪಕ್ಕ ಆಗುತ್ತದೆ ಇದು ರಾಜ್ಯದ ಪ್ರತಿಯೊಬ್ಬ ಮತದಾರರು ಯೋಚಿಸ ಬೇಕಾದಂತಹ ವಿಷಯವಾಗಿದೆ ಅದೇ ರೀತಿಯಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ರಾಜ್ಯದ ಜನತೆಗೆ ಮತ್ತೊಂದು ಬರೆ ಹಾಕಿದ ಸರ್ಕಾರದ ವಿರುದ್ಧ ಜಯ ಕರ್ನಾಟಕ ಸಂಘಟನೆಯ ಯಡ್ರಾಮಿ ತಾಲೂಕ ಅಧ್ಯಕ್ಷರಾದ ಚಂದ್ರು ಮಲಬಾದ ಅವರು ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ….


Share