ಕುವೈತ್: ದಕ್ಷಿಣ ಅಹ್ಮದಿ ಗವರ್ನರೇಟ್‌ನಲ್ಲಿ 46 ಭಾರತೀಯರು ಸೇರಿದಂತೆ 50 ಜನರನ್ನು ಬಲಿತೆಗೆದುಕೊಂಡ ವಿನಾಶಕಾರಿ ಅಗ್ನಿ ಅವಘಡದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಕುವೈತ್ ಸರ್ಕಾರವು ತಲಾ 15,000 ಡಾಲರ್ ಪರಿಹಾರವನ್ನು ನೀಡಲಿದೆ.
ಕುವೈತ್ ಅಧಿಕಾರಿಗಳ ಪ್ರಕಾರ, ಜುಲೈ 12 ರಂದು ಮಂಗಾಫ್ ನಗರದ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಬೃಹತ್ ಅಗ್ನಿ ಅವಘಡವು ಕಟ್ಟಡದ ನೆಲ ಮಹಡಿಯಲ್ಲಿರುವ ಭದ್ರತಾ ಸಿಬ್ಬಂದಿ ಕೋಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಯಿತು.ಈ ಕಟ್ಟಡವು 196 ವಲಸೆ ಕಾರ್ಮಿಕರಿಗೆ ನೆಲೆಯಾಗಿತ್ತು, ಬೆಂಕಿ ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದಾರೆ. ಕುವೈತ್‌ನ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆದೇಶದ ಮೇರೆಗೆ, ಸಂತ್ರಸ್ತರ ಕುಟುಂಬಗಳು ತಲಾ 15,000 ಡಾಲರ್ (ಅಂದಾಜು 12.5 ಲಕ್ಷ ರೂಪಾಯಿ) ಪರಿಹಾರವನ್ನು ಪಡೆಯುತ್ತವೆ ಎಂದು ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಸರ್ಕಾರಿ ಮೂಲಗಳು ಪರಿಹಾರ ಪಾವತಿಗಳನ್ನು ಪ್ರಕ್ರಿಯೆಗೊಳಿಸಿ ಸಂತ್ರಸ್ತರ ರಾಯಭಾರ ಕಚೇರಿಗಳಿಗೆ ತಲುಪಿಸುತ್ತದೆ ಎಂದು ಹೇಳಲಾಗಿದೆ.