ದೇಶದ 41 ವಿಮಾನ ನಿಲ್ದಾಣಗಳು, ಮುಂಬೈನ 50ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ದೇಶದ 41 ವಿಮಾನ ನಿಲ್ದಾಣಗಳು, ಮುಂಬೈನ 50ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

Share

ದೇಶದ 41 ವಿಮಾನ ನಿಲ್ದಾಣಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್‌ ಬಂದಿದೆ. ಭದ್ರತಾ ಏಜೆನ್ಸಿಗಳು ಗಂಟೆಗಳ ಕಾಲ ನಡೆಸಿದ ತಪಾಸಣೆಯ ನಂತರ ಅದು ಹುಸಿ ಬೆದರಿಕೆ ಎಂದು ದೃಢಪಟ್ಟಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣಗಳಲ್ಲಿ ಮಧ್ಯಾಹ್ನ 12.40 ರ ಸುಮಾರಿಗೆ ಇ-ಮೇಲ್ ಐಡಿ exhumedyou888@gmail.com ನಿಂದ ಇಮೇಲ್‌ ಸ್ವೀಕರಿಸಲಾಗಿದೆ. “KNR” ಎಂದು ಕರೆಯಲಾಗುವ ಆನ್‌ಲೈನ್ ಗುಂಪು ಈ ಸುಳ್ಳು ಬೆದರಿಕೆ ಇಮೇಲ್‌ಗಳ ಹಿಂದೆ ಇದೆ ಎಂದು ಶಂಕಿಸಲಾಗಿದೆ.ಈ ಗುಂಪು ಮೇ 1 ರಂದು ದೆಹಲಿ-ಎನ್‌ಸಿಆರ್‌ನ ಹಲವಾರು ಶಾಲೆಗಳಿಗೆ ಇದೇ ರೀತಿಯ ಇಮೇಲ್‌ ಮಾಡಿತ್ತು ಎನ್ನಲಾಗಿದೆ. ವಿಮಾನ ನಿಲ್ದಾಣಗಳು ಸ್ವೀಕರಿಸಿದ ಇಮೇಲ್‌ಗಳು ಬಹುತೇಕ ಒಂದೇ ರೀತಿಯ ಸಂದೇಶ ಹೊಂದಿದ್ದವು: “ಹಲೋ, ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಬಾಂಬ್‌ಗಳು ಶೀಘ್ರದಲ್ಲೇ ಸ್ಫೋಟಗೊಳ್ಳಲಿದ್ದು, ನೀವೆಲ್ಲರೂ ಸಾಯುತ್ತೀರಿ ಎಂದು ಆತಂಕ ಹುಟ್ಟಿಸಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳು ಇದು ಹುಸಿ ಬೆದರಿಕೆ ಎಂದು ವರದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಮುಂಬೈನ ಜಸ್ಲೋಕ್, ರಹೇಜಾ, ಸೆವೆನ್ ಹಿಲ್, ಕೊಹಿನೂರ್ ಆಸ್ಪತ್ರೆ ಸೇರಿದಂತೆ 50 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. VPN ನೆಟ್‌ವರ್ಕ್ ಬಳಸಿ ಈ ಇಮೇಲ್ ಕಳುಹಿಸಲಾಗಿದೆ. ಕಳುಹಿಸುವವರ ಗುರುತು ಮತ್ತು ಬೆದರಿಕೆಯ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


Share