ಪರಿಸರ ದಿನಾಚರಣೆ ಸಸಿ ನೆಟ್ಟು ನೀರೆರದೆ ಎಂ.ಪಿ ನಾಸೀರ್ ಹುಸೇನ್

ಪರಿಸರ ದಿನಾಚರಣೆ ಸಸಿ ನೆಟ್ಟು ನೀರೆರದೆ ಎಂ.ಪಿ ನಾಸೀರ್ ಹುಸೇನ್

Share

ಬಳ್ಳಾರಿ ನಗರದ ಬಂಡೀಮೊಟ್ ಎ.ಪಿ.ಎಂ.ಸಿ ಹತ್ತಿರದಲ್ಲಿರುವ ಈದ್ಗಾ ಮೈದಾನದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಕ್ಫ್ ಬೋರ್ಡ್ ಅಧ್ಯಕ್ಷರಾದ ಹುಮಾಯೂನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯಸಭಾ ಸದ್ಯಸರಾದ ನಾಸೀರ್ ಹುಸೇನ್ ರವರು ಈದ್ಗಾ ಮೈದಾನದಲ್ಲಿ ಸಸಿ ನೆಟ್ಟು ಸಸಿಗೆ ನೀರೆರೆದರು. ಈದ್ಗಾ ಸಮಿತಿ ಅಧ್ಯಕ್ಷರಾದ ಭಂ ಭಂ ದಾದಾ, ಉಪಾದ್ಯಾಕ್ಷರಾದ ಅಲ್ಲಾ ಬಕಾಷ್, ಮುಖಂಡರುಗಳಾದ ಆಯಾಜ್ ಅಹಮ್ಮದ್, ಪರ್ವೇಜ್ ಅಸ್ಲಂ ಬಾಷಾ, ಹಾಜಿ ಮಸ್ತಾನ್ ಸಾಬ್, ಪಾಲಿಕೆ ಸದಸ್ಯರಾದ ಆಸೀಫ್, ಟಿ ನೀಯಾಜ್ ಅಹಮ್ಮದ್, ಹರ್ಷದ್, ಸಮೀರ್ ಮತ್ತು ಮೀರಾ ಹುಸೇನ್ ಕೈ ಜೋಡಿಸಿದರು.ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಸಯ್ಯದ್ ನಾಸಿರ್ ಹುಸೇನ್ ಸುದ್ದಿಗಾರರ ಜೊತೆ ಮಾತನಾಡಿ, ಈದ್ಗಾ ಸ್ವಚ್ಚತೆಗಾಗಿ ನಾನು ಯಾವತ್ತು ಮುಂದೆ ಇರುತ್ತೇನೆ, ನಮ್ಮ ಸಮುದಾಯದವರೆಲ್ಲರೂ ಅಹಂ ಬಿಟ್ಟು ಅಭಿವೃದ್ಧಿಗೆ ಕೈ ಜೋಡಿಸಿ ಸಮುದಾಯದ ಏಳಿಗೆಯನ್ನು ಮಾಡಬೇಕಿದೆ, ಮುಂದಿನ ದಿನಗಳಲ್ಲಿ ಈದ್ಗಾ ಅಥಾವ ಸಮುದಾಯದ ಯಾವುದೇ ಸಮಸ್ಯೆ ಇದ್ದಲ್ಲಿ ನಾನು ಮುಂದೆ ನಿಂತು ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಸೈಫುಲ್ಲಾ, , ಆಫೀಜುದ್ದೀನ್, ಹಾರ್ಡ್ ವೇರ್ ಖಲೀಲ್, ರಫೀಕ್, ಜಾಫರ್ ಗೌಸ್ ಬೈ, ಸ್ನೇಕ್ ಸಮೀರ್ ಸೇಟ್, ಹುಸೇನ್ ಸಾಬ್, ಅನ್ನು (ಅನ್ವರ್), ಬಾಬಲಿ, ಖಸೀಮ್ , ತೌಸೀಫ್ , ಸೇರಿದಂತೆ ಹಲವಾರು ಜನ ಮುಖಂಡರುಗಳಿದ್ದರು.


Share