ಸೌಹರ್ದ ಸಹಕಾರಿ ಬಳಗದಿಂದ ಸಸಿ ನಾಟಿ ಅಭಿಯಾನ ೪೦೦ ಗಿಡ ನೆಡುವ ಗುರಿ, ಪರಿಸರ ಜಾಗೃತಿ: ಎಂ.ಶಾಂತ ಮೂರ್ತಿ

ಸೌಹರ್ದ ಸಹಕಾರಿ ಬಳಗದಿಂದ ಸಸಿ ನಾಟಿ ಅಭಿಯಾನ ೪೦೦ ಗಿಡ ನೆಡುವ ಗುರಿ, ಪರಿಸರ ಜಾಗೃತಿ: ಎಂ.ಶಾಂತ ಮೂರ್ತಿ

Share

ಗಂಗಾವತಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಸೌಹರ್ದ ಸಹಕಾರಿ ಸಂಘಗಳ ಬಳಗದಿಂದ ನಗರದ ವಿವಿಧೆಡೆ ಸುಮಾರು ೪೦೦ ಸಸಿ ನೆಡುವ ಮೂಲಕ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ಹಾಗು ಗಾಲಿ ಶ್ರೀ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕರಾದ ಎಂ.ಶಾಂತ ಮೂರ್ತಿ ಹೇಳಿದರು.ಅವರು ಇಲ್ಲಿನ ಭಗತ್‌ಸಿಂಗ್ ನಗರದ ಸರಕಾರಿ ಶಾಳೆಯಲ್ಲಿ ಸಸಿ ನಟ್ಟಬಳಿಕ ಮಾತನಾಡಿದರು. ಶಾಲಾ ಕಾಲೇಜು ಆಸ್ಪತ್ರೆ ಆವರಣ ಇಂಥ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಮೂಲಕ ಸಾರ್ವಜನಿಕ ಜಾಗೃತಿ ಕೂಡಾ ಹಮ್ಮಿಕೊಳ್ಳಲಾಗಿದೆ. ಶಾಲಾ ಆವರಣದಲ್ಲಿ ಸಸಿ ನೆಟ್ಟ ನಂತರ ಅಲ್ಲಿನ ಆಡಳಿತ ಮಂಡಳಿಗೆ ಪೋಷಣಾ ಜವಬ್ದಾರಿ ವಹಿಸಲಾಗುತ್ತದೆ ಹೀಗಾಗಿ ಗಿಡಗಳ ರಕ್ಷೆಣೆಯೂ ಆಗುತ್ತದೆ ಎಂದರು.ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಪ್ರಮುಖ ನಾಗಲಿಂಗಪ್ಪ ಪತ್ತಾರ ಮಾತನಾಡಿ, ಅರಣ್ಯ ಇಲಾಖೆಯು ಪ್ರಮುಖ ಪಾತ್ರ ವಹಿಸಬೇಕಿದೆ, ರೈತಾಪಿ ವರ್ಗವನ್ನು ಜಾಗೃತಿಗೊಳಿಸಿ ಬದುಗಳಲ್ಲಿ ಗಿಡ ನೆಡುವ ಮೂಲಕ ರೈತರಿಗೆ ವರಮಾನ ಬರುವಂತೆ ಮಾಡಬೇಕಿದೆ, ಪರ್ಯಾಯ ಆದಾಯ ರೈತರಿಗೆ ಬರುವುದರಿಂದ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ ಎಂದು ಕಿವಿಮಾತು ಹೇಳಿದರು. ಸಹಕಾರಿ ಸಂಘಗಳ ಬಳಗದ ಉಪಾಧ್ಯಕ್ಷರಾದ ಕಲ್ಯಾಣ ಬಸವ, ಖಜಾಂಚಿ ಶಾಂತಯ್ಯ ಹಿರೇಮಠ, ವಿವಿಧ ಸಹಕಾರಿ ಸಂಘಗಳ ವ್ಯವಸ್ಥಾಪಕರಾದ ಮೌನೇಶ್ ಬಡಿಗೇರಾ, ಕೆ ಷಣ್ಮುಖಪ್ಪ, ಪಿ.ಹಾಬಳೇಶ್, ಹೆಚ್. ಸತೀಶ್, ಕೆ.ನರಸಿಂಹ, ರಾಘವೇಂದ್ರ ಐಲಿ, ಸಂತೋಷ್ ಲಂಕೆ, ರಾಘವೇಂದ್ರ ಪತ್ತಾರ್ ಹಾಗು ಲಿಂಗಾರಾಜ್ ದಿನ್ನಿ ಇದ್ದರು.


Share