ಜೇವರ್ಗಿ ತಾಲೂಕಿನ ನರಿಬೋಳ್ ಗ್ರಾಮದ ಗುರುರಾಜ್ ಸುಬೇದಾರ್ ಅವರನ್ನು ನಿಗಮ ಮಂಡಳಿಯ ನಾಮ ನಿರ್ದೇಶಕರನ್ನಾಗಿ ನೇಮಿಸಬೇಕೆಂದು ಯಡ್ರಾಮಿ ತಾಲೂಕ ಅಹಿಂದ ಸಂಘಟನೆಯ ತಾಲೂಕ ಅಧ್ಯಕ್ಷ ಶಿವಶಂಕರ್ ಗುಂಡಗುರ್ತಿ ಅವರು ಮತ್ತು ಮಹಾಂತಗೌಡ ಆರ್ ಪಾಟೀಲ್ ಹಂಗರಗಾ( ಕೆ) ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಗುರುರಾಜ್ ಸುಬೇದಾರ್ ಅವರು ತಮ್ಮ ತಂದೆಯವರ ಮಾರ್ಗದರ್ಶನದಂತೆ ಅವರ ತಂದೆಯ ಆಶಯದಂತೆ ಸುಮಾರು 20 ವರ್ಷಕ್ಕೂ ಅಧಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದಾರೆ ಜೊತೆಗೆ ವಾಲ್ಮೀಕಿ ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ ಗ್ರಾಮ ಪಂಚಾಯತ ನಿಂದ ಹಿಡಿದು ತಾಲೂಕ ಪಂಚಾಯತ್ ಜಿಲ್ಲಾ ಪಂಚಾಯತ್ ಮತ್ತು ವಿಧಾನಸಭೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದಾರೆ ಇವರ ಪಕ್ಷ ನಿಷ್ಠೆ ಒಳ್ಳೆಯ ನಾಯಕತ್ವವನ್ನು ಗುರುತಿಸಿ ನಿಗಮ ಮಂಡಳಿಗೆ ನೇಮಿಸಬೇಕು ಸ್ಥಳೀಯ ಶಾಸಕರಾದ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ ಅಜಯ್ ಸಿಂಗ್ ಅವರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಯಡ್ರಾಮಿ ತಾಲೂಕ ಅಹಿಂದ್ ಸಂಘಟನೆಯ ಅಧ್ಯಕ್ಷರಾದ ಶಿವಶಂಕರ್ ಗುಂಡಗುರ್ತಿ ಅವರು ಮತ್ತು ಮಹಾಂತಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ….