ಜೇವರ್ಗಿ ತಾಲೂಕಿನ ಶಿವಲಿಂಗಪ್ ಗೌಡ ಪಾಟೀಲ್ ನಗರದಲ್ಲಿ ಇದುವರೆಗೆ ಸಿಸಿ ರಸ್ತೆ ಮತ್ತು ಚರಂಡಿ ಚರಂಡಿ ನಿರ್ಮಾಣ ಮಾಡಿರುವುದಿಲ್ಲ ಮಳೆಗಾಲ ಬಂದ್ರೆ ಸಾಕು ಈ ವಾರ್ಡಿನಲ್ಲಿ ರಸ್ತೆ ಯಾವುದು ಚರಂಡಿ ಯಾವುದು ಎಂಬುದೇ ತಿಳಿಯದಂತಾಗಿದೆ ವಯಸ್ಸಾದ ವೃದ್ದರು ಮತ್ತು ಮಕ್ಕಳು ಈ ವಾರ್ಡ್ನಲ್ಲಿ ಸಂಚಾರ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿದೆ ಈ ವಾರ್ಡಗೆ ಸಂಬಂಧಪಟ್ಟ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಪುರಸಭೆ ಅಧಿಕಾರಿಗಳು ಈ ನಮ್ಮ ವಾರ್ಡಗೆ ಆದಷ್ಟು ಶೀಘ್ರದಲ್ಲಿ ಸಿಸಿ ರಸ್ತೆ ನಿರ್ಮಾಣ ಮತ್ತು ಚರಂಡಿ ನಿರ್ಮಾಣ ಮಾಡಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದರೆ ಉಗ್ರವಾದ ಹೋರಾಟವನ್ನು ಪಟ್ಟಣ ಪಂಚಾಯತ್ ಅಧಿಕಾರಿಗಳ ಕಾರ್ಯಾಲಯದ ಮುಂದೆ ಹಮ್ಮಿಕೊಳ್ಳಲಾಗುವುದು ಎಂದು ಶಿವಲಿಂಗಪ್ಪ ಗೌಡ ಪಾಟೀಲ್ ನಗರದ ನಿವಾಸಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ….