2023ರಲ್ಲಿ ಚೀನಾ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಯುಕೆ ಮತ್ತು ಯುಎಸ್ ತಮ್ಮ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಒಟ್ಟು 91.4 ಶತಕೋಟಿ ಡಾಲರ್ ಖರ್ಚು ಮಾಡಿವೆ.
ಯುನೈಟೆಡ್ ಸ್ಟೇಟ್ಸ್‌ನ ಒಟ್ಟು ಖರ್ಚಿನ ಪಾಲು 51.5 ಶತಕೋಟಿ ಡಾಲರ್, ಇತರ ಎಲ್ಲಾ ಪರಮಾಣು-ಶಸ್ತ್ರಸಜ್ಜಿತ ದೇಶಗಳಿಗಿಂತ ಹೆಚ್ಚು ಮತ್ತು 2023ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ವೆಚ್ಚದಲ್ಲಿ ಶೇಕಡ 80ರಷ್ಟು ಹೆಚ್ಚಳವಾಗಿದೆ. ನಂತರದ ಸ್ಥಾನದಲ್ಲಿ ಚೀನಾ ಇದೆ. ಚೀನಾ 11.8 ಶತಕೋಟಿ ಡಾಲರ್ ಖರ್ಚು ಮಾಡಿದೆ. ರಷ್ಯಾ ಪರಮಾಣು ಶಸ್ತ್ರಾಸ್ತ್ರಗಾಗಿ 8.3 ಶತಕೋಟಿ ಡಾಲರ್ ಖರ್ಚು ಮಾಡಿದ್ದು ಮೂರನೇ ಅತಿ ದೊಡ್ಡ ದೇಶವಾಗಿದೆ. ಬ್ರಿಟನ್ ಖರ್ಚು ಸತತವಾಗಿ ಎರಡನೇ ವರ್ಷಕ್ಕೆ ಶೇಕಡ 17ರಷ್ಟು ಹೆಚ್ಚಳದೊಂದಿಗೆ 8.1 ಶತಕೋಟಿ ಡಾಲರ್ ಗೆ ಗಣನೀಯವಾಗಿ ಏರಿಕೆಯಾಗಿದೆ.ಐಕಾನ್ ವರದಿ ಪ್ರಕಾರ, ಕಳೆದ 5 ವರ್ಷಗಳಲ್ಲಿ, ಪರಮಾಣು ಶಸ್ತ್ರಾಸ್ತ್ರಗಳಿಗಾಗಿ 387 ಶತಕೋಟಿ ಡಾಲರ್ ಖರ್ಚು ಮಾಡಲಾಗಿದೆ. ವಾರ್ಷಿಕ ವೆಚ್ಚವು ಶೇಕಡ 34ರಷ್ಟು 68.2 ಶತಕೋಟಿ ಡಾಲರ್ ಯಿಂದ 91.4 ಶತಕೋಟಿ ಡಾಲರ್ ಗೆ ಹೆಚ್ಚಾಗಿದೆ. ಏಕೆಂದರೆ ಎಲ್ಲಾ ಒಂಬತ್ತು ಪರಮಾಣು-ಶಸ್ತ್ರಸಜ್ಜಿತ ರಾಷ್ಟ್ರಗಳ ಆಧುನೀಕರಣವನ್ನು ಮುಂದುವರೆಸುತ್ತಿವೆ. ವರದಿಯ ಸಹ-ಲೇಖಕಿ ಅಲಿಸಿಯಾ ಸ್ಯಾಂಡರ್ಸ್-ಝಾಕ್ರೆ ಪ್ರಕಾರ, “ಕಳೆದ ಐದು ವರ್ಷಗಳಲ್ಲಿ ಈ ಅಮಾನವೀಯ ಮತ್ತು ವಿನಾಶಕಾರಿ ಶಸ್ತ್ರಾಸ್ತ್ರಗಳ ಮೇಲೆ ಖರ್ಚು ಮಾಡುವ ವೇಗವು ಜಾಗತಿಕ ಭದ್ರತೆಯನ್ನು ಸುಧಾರಿಸುತ್ತಿಲ್ಲ. ಆದರೆ ಜಾಗತಿಕ ಬೆದರಿಕೆಯನ್ನು ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.ದಿ ಗಾರ್ಡಿಯನ್ ಪ್ರಕಾರ, ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಪ್ರಿ) ಮಾಹಿತಿ ಪ್ರಕಾರ, ಸಕ್ರಿಯ ಪರಮಾಣು ಸಿಡಿತಲೆಗಳ ಸಂಖ್ಯೆಯು ಸ್ವಲ್ಪ ಹೆಚ್ಚಾಗಿದೆ ಎಂದು ತೋರಿಸುತ್ತದೆ. ಚೀನಾವು ತನ್ನ ಶಸ್ತ್ರಾಗಾರವನ್ನು 410 ರಿಂದ 500ಕ್ಕೆ ಹೆಚ್ಚಿಸಿದೆ. ಮತ್ತೊಂದೆಡೆ, ಭಾರತವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿದೆ. 2023ರಲ್ಲಿ ತನ್ನ ಪರಮಾಣು ಶಸ್ತ್ರಾಗಾರವನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಿತು. ಕಳೆದ ವರ್ಷ ಭಾರತ 164 ಸಿಡಿತಲೆಗಳನ್ನು ತಯಾರಿಸಿತ್ತು ಮತ್ತು 2024 ರಲ್ಲಿ ಈ ಸಂಖ್ಯೆ 172 ತಲುಪಲಿದೆ.